ಯಂಗ್ ಮಿಜೋರಾಂ ಸಂಘಟನೆ (ವೈಎಂಎ) ಮಿಜೋಗಳಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ ನೀಡಿದೆ. ಪ್ರತಿ ಸ್ಕ್ವೇರ್ ಕಿ.ಮೀ ಗೆ 52 ಜನರಿದ್ದು, ಅರುಣಾಚಲ ಪ್ರದೇಶದ ನಂತರ ಅತಿ ಕಡಿಮೆ ಜನಸಂಖ್ಯಾ ಸಾಂದ್ರತೆ ಹೊಂದಿರುವ ರಾಜ್ಯವಾಗಿದ್ದು, 11 ಲಕ್ಷ ಜನಸಂಖ್ಯೆ ಹೊಂದಿದೆ. ಐಎಂಎ ಪ್ರಕಾರ ಮಿಜೋರಾಂ ನಲ್ಲಿ ಸಾಕಷ್ಟು ಸ್ಥಳ ಇದ್ದು ಮಿಜೋಗಳು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ, ಉತ್ತರ ಪ್ರದೇಶ ಅಥವಾ ಬಿಹಾರದ ಒಂದು ಜಿಲ್ಲೆಯ ಜನಸಂಖ್ಯೆ ನಮ್ಮ ಒಂದು ರಾಜ್ಯದ ಜನಸಂಖ್ಯೆಯಾಗಿದೆ ಆದ್ದರಿಂದ ಹೆಚ್ಚು ಮಕ್ಕಳನ್ನು ಹೆರಿ ಎಂದು ಮಿಜೋರಾಂ ಜನತೆಗೆ ಸಂಘಟನೆ ಕರೆ ನೀಡಿದೆ.