ಸೋಮನಾಥ್ ಭಾರ್ತಿ
ಸೋಮನಾಥ್ ಭಾರ್ತಿ

ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದಿಂದ ಆಪ್ ಶಾಸಕರನ್ನು ಬಲವಂತವಾಗಿ ಹೊರಹಾಕಿದ ಪೊಲೀಸರು

ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಆಪ್ ಸರ್ಕಾರದ ಬಿಕ್ಕಟ್ಟು ತಾರಕಕ್ಕೇರಿದ್ದು, ಮಂಗಳವಾರ ಎಎಪಿ ಶಾಸಕರಾದ...
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಆಪ್ ಸರ್ಕಾರದ ಬಿಕ್ಕಟ್ಟು ತಾರಕಕ್ಕೇರಿದ್ದು, ಮಂಗಳವಾರ ಎಎಪಿ ಶಾಸಕರಾದ ಸೋಮನಾಥ್ ಭಾರ್ತಿ ಮತ್ತು ಎಸ್ ಕೆ ಬಗ್ಗ ಅವರನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸದಿಂದ ಬಲವಂತವಾಗಿ ಹೊರ ಹಾಕಲಾಗಿದೆ.
ಬೈಜಾಲ್ ಅವರು ದೆಹಲಿ ಮಾಸ್ಟರ್ ಪ್ಲಾನ್ - 2021ರ ಕುರಿತು ಸಾರ್ವಜನಿಕರ ಸಲಹೆ ಪಡೆಯುವ ಕುರಿತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸಭೆ ಕರೆದಿದ್ದರು.
ಸಭೆಯ ನಂತರ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸ ಹಾಗೂ ಕಚೇರಿ ರಾಜ್ ನಿವಾಸದಿಂದ ನಿರ್ಗಮಿಸಲು ನಿರಾಕರಿಸಿದ ಸೋಮನಾಥ್ ಭಾರ್ತಿ ಮತ್ತು ಎಸ್ ಕೆ ಬಗ್ಗ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಧರಣಿಯಲ್ಲಿ ಭಾಗವಹಿಸಲು ಯತ್ನಿಸಿದರು ಎಂದು ರಾಜ್ ನಿವಾಸ್ ಪ್ರಕಟಣೆಯಲ್ಲಿ ತಿಳಿಸಿದೆ.
'ಅನಧಿಕೃತವಾಗಿ ಇಲ್ಲಿ ಉಳಿದುಕೊಳ್ಳಬೇಡಿ ಎಂದು ಆಪ್ ಶಾಸಕರಿಗೆ ಪದೇ ಪದೆ ಮನವಿ ಮಾಡಲಾಯಿತು. ಸುಮಾರು ಎರಡು ಗಂಟೆ ಕಳೆದುರೂ ಅವರು ಇಲ್ಲಿಂದ ತೆರಳಲಿಲ್ಲ. ಹೀಗಾಗಿ ಹೊರ ಹಾಕಲಾಗಿದೆ' ಎಂದು ರಾಜ್ ನಿವಾಸ್ ಸ್ಪಷ್ಟಪಡಿಸಿದೆ.
ಲೆಫ್ಟಿನೆಂಟ್ ಗವರ್ನರ್ ಅವರು ರಾಜ್ ನಿವಾಸ್ ಆವರಣದಲ್ಲಿ ನಮ್ಮನ್ನು ಬಲವಂತವಾಗಿ ಹೊರ ಹಾಕಲಾಗಿದೆ ಎಂದು ಭಾರ್ತಿ ಆರೋಪಿಸಿದ್ದಾರೆ.
ಕನಿಷ್ಠ ಎರಡು ನಿಮಿಷ ನಮ್ಮ ಸಮಸ್ಯೆ ಆಲಿಸುವ ಬದಲು ಎಸಿಪಿ ಶ್ರಿ ತ್ಯಾಗಿ ನೇತೃತ್ವದ ಪೊಲೀಸ್ ಪಡೆಯನ್ನು ಬಳಸಿ ನಮ್ಮನ್ನು ಹೊರಹಾಕಿದ್ದು ನಾಚಿಕೆಗೇಡಿತನ ಎಂದು ಭಾರ್ತಿ ಟ್ವೀಟ್ ಮಾಡಿದ್ದಾರೆ.
ಐಎಎಸ್ ಅಧಿಕಾರಿಗಳು ಅಘೋಸಿತ ಮುಷ್ಕರ ಹಿಂಪಡೆಯುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಬೇಕು ಎಂದು ಒತ್ತಾಯಿಸಿ ಕೇಜ್ರಿವಾಲ್ ಅವರು ಕಳೆದ ಜೂನ್ 11ರಿಂದ ಧರಣಿ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com