ಯೋಗ ದಿನ ವಿಶೇಷ: ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಸೈನಿಕರ ಯೋಗ
ಭಾರತೀಯ ಸೈನಿಕರ ಸಾಮರ್ಥ್ಯದ ಅನಾವರಣಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ವೇದಿಕೆಯಾಗಿದ್ದು, ಬಿಸಿ ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಭಾರತೀಯ ಸೈನಿಕರು ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಲಡಾಖ್: ಭಾರತೀಯ ಸೈನಿಕರ ಸಾಮರ್ಥ್ಯದ ಅನಾವರಣಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ವೇದಿಕೆಯಾಗಿದ್ದು, ಬಿಸಿ ರಕ್ತವನ್ನೇ ಹೆಪ್ಪುಗಟ್ಟಿಸುವ ಹಿಮಗಡ್ಡೆಗಳ ನಡುವೆ ಭಾರತೀಯ ಸೈನಿಕರು ಯೋಗ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಸಮುದ್ರ ಮಟ್ಟದಿಂದ ಬರೊಬ್ಬರಿ 18 ಸಾವಿರ ಅಡಿಗಳಷ್ಟು ಮೇಲಿರುವ ಇಂಡೋ-ಟಿಬೆಟಿಯನ್ ಗಡಿಯಲ್ಲಿ ಕರ್ತವ್ಯನಿರತರಾಗಿದ್ದ ಸುಮಾರು 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಯೋಗ ಪ್ರದರ್ಶನ ಮಾಡಿದರು. ಐಟಿಬಿಪಿಯ ಸುಮಾರು 30ಕ್ಕೂ ಹೆಚ್ಚು ಯೋಧರು ಯೋಗದ ಮಾಡುವ ವಿಡಿಯೋ ಇದೀಗ ವೈರಲ್ ಅಗಿದೆ.
ಅಂತೆಯೇ ಇತ್ತ ಕೊರೆವ ಚಳಿಯಲ್ಲೇ ಅರುಣಾಲ ಪ್ರದೇಶದ ಲೋಹಿತ್ ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯಲ್ಲಿನ ದಿಗರು ನದಿಯಲ್ಲಿ ಐಟಿಬಿಪಿಯ ಸುಮಾರು 20ಕ್ಕೂ ಅಧಿಕ ಯೋಧರು ನದಿ ಯೋಗ ಪ್ರದರ್ಶನ ಮಾಡಿದರು. ಅತ್ಯಂತ ಚಳಿಯ ನಡುವೆಯೇ ಸೈನಿಕರು ಮಾಡಿದ ಯೋಗ ವಿಶೇಷವಾಗಿತ್ತು.
#WATCH Indo-Tibetan Border Police personnel perform Surya Namaskar in cold desert of Ladakh at an altitude of 18,000 feet pic.twitter.com/ky3PmJUm0G