ಹಿಂದು-ಮುಸ್ಲಿಂ ದಂಪತಿಗೆ ಅವಮಾನ ಪ್ರಕರಣ: ಪಾಸ್'ಪೋರ್ಟ್ ಅಧಿಕಾರಿ ವರ್ಗಾವಣೆ

ಹಿಂದು-ಮುಸ್ಲಿಂ ದಂಪತಿಗಳಿಗೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್ ಪೋರ್ಟ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಗುರುವಾರ ತಿಳಿದುಬಂದಿದೆ...
ಹಿಂದು-ಮುಸ್ಲಿಂ ದಂಪತಿಗೆ ಅವಮಾನ ಪ್ರಕರಣ: ಪಾಸ್'ಪೋರ್ಟ್ ಅಧಿಕಾರಿ ವರ್ಗಾವಣೆ
ಹಿಂದು-ಮುಸ್ಲಿಂ ದಂಪತಿಗೆ ಅವಮಾನ ಪ್ರಕರಣ: ಪಾಸ್'ಪೋರ್ಟ್ ಅಧಿಕಾರಿ ವರ್ಗಾವಣೆ
ಲಖನೌ; ಹಿಂದು-ಮುಸ್ಲಿಂ ದಂಪತಿಗಳಿಗೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್ ಪೋರ್ಟ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಗುರುವಾರ ತಿಳಿದುಬಂದಿದೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪಾಸ್ ಪೋರ್ಟ್ ಅಧಿಕಾರಿ ಪಿಯೂಷ್ ವರ್ಮಾ ಅವರು, ದಂಪತಿಗಳಿಗೆ ಅವಮಾನ ಮಾಡಿದ್ದ ಅಧಿಕಾರಿಗಳಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ದಂಪತಿಗಳಾಗ ಮೊಹಮ್ಮದ್ ಅನಾಸ್ ಸಿದ್ದಿಕಿ ಮತ್ತು ತಾನ್ವಿ ಸೇಠ್ ಅವರನ್ನು ನನ್ನ ಕಚೇರಿಯಲ್ಲಿ ಭೇಟಿ ಮಾಡಿ ಪಾಸ್ ಪೋರ್ಟ್ ಗಳನ್ನು ನೀಡಲಾಗಿದೆ. ಪ್ರಕರಣ ಸಂಬಂಧ ವಿದೇಶಾಂಗ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಟನೆಗೆ ಆರ್'ಪಿಒ ವಿಷಾದ ವ್ಯಕ್ತಪಡಿಸುತ್ತದೆ. ಇಂತಹ ಘಟನೆಗಳು ಮರುಕಳುಹಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಧಿಕಾರಿ ವಿಕಾಸ್ ಮಿಶ್ರಾ ಅವರು, ಮದುವೆ ಸಂದರ್ಭದಲ್ಲಿ ಮಹಿಳೆ ಶಾದಿಯಾ ಅನಾಸ್ ಎಂದು ಹೆಸರು ನೀಡಿದ್ದು, ವಿವಾಹ ಪ್ರಮಾಣದಲ್ಲಿರುವ ಹೆಸರನ್ನು ನೀಡುವಂತೆ ತಿಳಿಸಿದ್ದೆ. ಆದರೆ, ಅದಕ್ಕೆ ಮಹಿಳೆ ನಿರಾಕರಿಸಿದ್ದರು ಎಂದು ಹೇಳಿದ್ದಾರೆ. 
ಹಿಂದು-ಮುಸ್ಲಿಂ ದಂಪತಿಗಳಿಗೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿವಾಹ ಸಂದರ್ಭದಲ್ಲಿ ಮಹಿಳೆ ತನ್ನ ಹೆಸರನ್ನು ಶಾದಿಯಾ ಅನಾಸ್ ಎಂಬ ಹೆಸರನ್ನು ನೀಡಿದ್ದು, ಈ ಹೆಸರನ್ನು ನೀಡುವಂತೆ ತಾನ್ವಿ ಸೇಠ್ ಅವರಿಗೆ ತಿಳಿಸಿದ್ದೆ. ಆದರೆ, ಅದಕ್ಕೆ ಅವರು ನಿರಾಕರಿಸಿದ್ದರು. ಪಾಸ್ ಪೋರ್ಟ್ ಪಡೆಯುವ ಸಲುವಾಗಿ ವ್ಯಕ್ತಿಗಳು ತಮ್ಮ ಹೆಸರನ್ನು ಬದಲಾಯಿಸುತ್ತಿಲ್ಲ ಎಂಬುದನ್ನು ನಾವು ಪರಿಶೀಲನೆ ನಡೆಸಬೇಕು. ಹೀಗಾಗಿ ಮಹಿಳೆಗೆ ಮದುವೆಯಾದ ಬಳಿಕದ ಹೆಸರನ್ನು ನೀಡುವಂತೆ ತಿಳಿಸಲಾಗಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com