ಕಾಲೊನಿಗಳ ಮರು ನಿರ್ಮಾಣ ಯೋಜನೆ ರದ್ದುಗೊಳಿಸಿ: ಕೇಂದ್ರಕ್ಕೆ ಆಪ್ ಆಗ್ರಹ

ದಕ್ಷಿಣ ದೆಹಲಿಯ ಏಳು ಕಾಲೊನಿಗಳ ಮರು ನಿರ್ಮಾಣ ಯೋಜನೆಯನ್ನು ರದ್ದುಗೊಳಿಸುವಂತೆ ಆಮ್ ಆದ್ಮಿ ಪಕ್ಷ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ದಕ್ಷಿಣ ದೆಹಲಿಯ ಏಳು ಕಾಲೊನಿಗಳ ಮರು ನಿರ್ಮಾಣ ಯೋಜನೆಯನ್ನು ರದ್ದುಗೊಳಿಸುವಂತೆ ಆಮ್ ಆದ್ಮಿ ಪಕ್ಷ ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಏಳು ಕಾಲೊನಿಗಳ ಮರು ನಿರ್ಮಾಣ ಯೋಜನೆಗಾಗಿ ಮರಗಳನ್ನು ಕಡಿಯದಂತೆ ತಡೆ ನೀಡಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ ಆಪ್, ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಮರ ಕಡಿಯಲು ತನ್ನ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಬಿಜೆಪಿ ನಾಯಕರು ಸಮಸ್ಯೆಯಿಂದ ಜಾರಿಕೊಳ್ಳುತ್ತಿದ್ದಾರೆ. ಅವರಿಗೆ ನಿಜಕ್ಕೂ ಮರ ಉಳಿಸಲು ಬಯಸಿದರೆ ಮೊದಲು ಯೋಜನೆಯನ್ನು ರದ್ದುಗೊಳಿಸಲಿ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಜ್ ಅವರು ಹೇಳಿದ್ದಾರೆ.
ವಸತಿ ಯೋಜನೆಗಾಗಿ ಸುಮಾರು 16,500ಕ್ಕು ಹೆಚ್ಚು ಮರಗಳನ್ನು ಕಡಿಯುವ ರಾಷ್ಟ್ರೀಯ ಕಟ್ಟಡ ನಿರ್ಮಾಣ ಕಾರ್ಪೊರೇಷನ್‌(ಎನ್ ಬಿಸಿಸಿ) ನಿರ್ಧಾರ ದೆಹಲಿ ಹೈಕೋರ್ಟ್ ಇಂದು ಮಧ್ಯಂತ ತಡೆ ನೀಡಿದೆ. ಅಲ್ಲದೆ  ಗೃಹ ನಿರ್ಮಾಣ ಯೋಜನೆಗಾಗಿ ಇಷ್ಟೊಂದು ಮರ ಕಡಿದರೆ ಅದನ್ನು ರಾಷ್ಟ್ರ ರಾಜಧಾನಿ ಹೇಗೆ ನಿಭಾಯಿಸುತ್ತದೆ? ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com