ಮೇಡಮ್ ಟ್ಯುಸಾಡ್ಸ್ ನಲ್ಲಿ ಮೊದಲ ಬಾರಿಗೆ ಯೋಗ ಗುರುಗಳ ಮೇಣದ ಪ್ರತಿಮೆ!

ಖ್ಯಾತ ಯೋಗಗುರು ಬಾಬಾ ರಾಮದೇವ್​ ಅವರ ಮೇಣದ ಪ್ರತಿಮೆಯನ್ನು ಲಂಡನ್​ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದೆ.
ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ಬಾಬಾ ರಾಮ್ ದೇವ್ ಪ್ರತಿಮೆ
ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ಬಾಬಾ ರಾಮ್ ದೇವ್ ಪ್ರತಿಮೆ
ನವದೆಹಲಿ: ಖ್ಯಾತ ಯೋಗಗುರು ಬಾಬಾ ರಾಮದೇವ್​ ಅವರ ಮೇಣದ ಪ್ರತಿಮೆಯನ್ನು ಲಂಡನ್​ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದೆ. 
ಆ ಮೂಲಕ ಲಂಡನ್ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ಭಾರತ ಮೂಲದ ಯೋಗಿ ಯೊಬ್ಬರ ಮೇಣದ ಪ್ರತಿಮೆಯನ್ನು ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಯೋಗಿಯೊಬ್ಬರ ಮೇಣದ ಪ್ರತಿಮೆಯ ಗರಿಮೆಗೆ ರಾಮ್​ದೇವ್​ ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ರಾಮ್​ದೇವ್​ ಅವರು ಲಂಡನ್​ಗೆ ತೆರಳಿದ್ದಾಗ ಅವರ ಸಂಪೂರ್ಣ ಅಳತೆಯನ್ನು ಸಂಗ್ರಹಾಲಯದಲ್ಲಿ ತೆಗೆದುಕೊಳ್ಳಲಾಗಿತ್ತು. ಇದೀಗ ನಿರ್ಮಾಣವಾಗಿರುವ ಪ್ರತಿಮೆ ಬಗ್ಗೆ ಟ್ವೀಟ್​ ಮಾಡಿರುವ ಬಾಬಾ ರಾಮ್​ದೇವ್​ ಅವರು ಜಗತ್ತಿನಾದ್ಯಂತ ಎಲ್ಲರನ್ನೂ ಆರೋಗ್ಯದಾಯಕ ಜೀವನಶೈಲಿ ಯೋಗದ ಕಡೆಗೆ ಕರೆದೊಯ್ಯಲು ಈ ಪ್ರತಿಮೆ ಸ್ಫೂರ್ತಿದಾಯಕವಾಗಿರುತ್ತದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆಯೇ ಸಂಗ್ರಹಾಲಯದ ಅಧಿಕಾರಿಗಳಿಂದ ರಾಮ್​ದೇವ್​ ಅವರ ಪ್ರತಿಮೆ ನಿರ್ಮಿಸಲು ವಿನಂತಿಸಿಕೊಂಡಿದ್ದರು. ನಂತರ ಅವರನ್ನು ಹಲವು ಪ್ರಸ್ತಾಪಗಳೊಂದಿಗೆ ಮನವೊಲಿಸಲಾಯಿತು ಎಂದು ಪತಂಜಲಿ ಆಡಳಿತಮೂಲ ತಿಳಿಸಿದೆ.
ಸಂಗ್ರಹಾಲಯದಲ್ಲಿರುವ ಹೆಸರಾಂತ ವ್ಯಕ್ತಿಗಳ ಪ್ರತಿಮೆಯ ಸಾಲಿಗೆ ರಾಮ್​ದೇವ್​ ಅವರು ಸೇರಿದ್ದು, ಈಗಾಗಲೇ ಸಂಗ್ರಹಾಲಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಕ್ರೀಡೆ, ಸಿನಿಮಾ ಮುಂತಾದ ವಿಭಾಗಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಯೋಗಿಯೊಬ್ಬರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com