ನೀರವ್ ಮೋದಿ ಬಂಧನಕ್ಕೆ ವಿದೇಶಾಂಗ ಇಲಾಖೆ ಬಲೆ, 3 ರಾಷ್ಟ್ರಗಳಿಗೆ ಪತ್ರ!

ಆಭರಣ ಉದ್ಯಮಿ ನೀರವ್ ಮೋದಿ ಬಂಧನಕ್ಕಾಗಿ ಬಲೆ ಬೀಸಿರುವ ಕೇಂದ್ರ ವಿದೇಶಾಂಗ ಇಲಾಖೆ ನೆರವು ಕೋರಿ ಮೂರು ರಾಷ್ಟ್ರಗಳಿಗೆ ಪತ್ರ ಬರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆದು, ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ಬಂಧನಕ್ಕಾಗಿ ಬಲೆ ಬೀಸಿರುವ ಕೇಂದ್ರ ವಿದೇಶಾಂಗ ಇಲಾಖೆ ನೆರವು ಕೋರಿ ಮೂರು ರಾಷ್ಟ್ರಗಳಿಗೆ ಪತ್ರ ಬರೆದಿದೆ.
ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮೂಲಗಳ ಪ್ರಕಾರ ಉದ್ಯಮಿ ನೀರವ್ ಮೋದಿ ಯೂರೋಪಿಯನ್ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲಿ ಯೂರೋಪ್ ನ ಮೂರು ರಾಷ್ಟ್ರಗಳಿಗೆ ಕೇಂದ್ರ ವಿದೇಶಾಂಗ ಇಲಾಖೆ ಪತ್ರ ಬರೆದಿದೆ. ಉದ್ಯಮಿ ನೀರವ್ ಮೋದಿ ಕುರಿತಂತೆ ಭಾರತೀಯ ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಗೆ ನೆರವು ನೀಡಬೇಕು ಮನವಿ ಮಾಡಿಕೊಂಡಿದೆ.
ಕೇಂದ್ರ ವಿದೇಶಾಂದ ಇಲಾಖೆ ಈ ಸಂಬಂಧ ಕಳೆದ ವಾರವೇ ಫ್ರಾನ್ಸ್, ಬ್ರಿಟನ್ ಮತ್ತು ಬೆಲ್ಜಿಯಂ ಸರ್ಕಾರಗಳಿಗೆ ಪತ್ರ ಬರೆದಿದ್ದು, ನೀರವ್ ಮೋದಿ ಕುರಿತ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದೆ. ಈಗಾಗಲೇ ಭಾರತೀಯ ತನಿಖಾ ಸಂಸ್ಥೆಗಳ ಬ್ರಿಟನ್ ನಲ್ಲಿ ತನಿಖೆ ನಡೆಸುತ್ತಿದ್ದು, ಲಂಡನ್ ನೀರವ್ ಮೋದಿ ತಲೆಮರೆಸಿಕೊಂಡಿರುವ ಕುರಿತು ಈ ಹಿಂದೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ನೀರವ್ ಮೋದಿ ವಿರುದ್ಧ ಕೋರ್ಟ್ ನಿಂದ ಜಾಮೀನು ರಹಿತ ವಾರಂಟ್ ಜಾರಿ ಮಾಡಿಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com