ಮಹಿಳೆಯರಿಗೆ ಇಂಟರ್ ನೆಟ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಕಾಡುವ ಮಜ್ನುಗಳೊಂದಿಗೆ ಈಗ ಮುಂಬೈ ಪೊಲೀಸರು ಫ್ರೆಂಡ್ ಶಿಪ್ ಬಯಸುತ್ತಿದು, ಬೆಂಡೆತ್ತಲು ತಯಾರಾಗಿದ್ದಾರೆ. ಗೊತ್ತೇ ಇಲ್ಲದ ವ್ಯಕ್ತಿಗಳು ಮೆಸೇಜ್ ಮಾಡಿ ಕಾಟ ನೀಡುತ್ತಿರುವ ಪ್ರಕರಣಗಳಿಂದ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಮಹಿಳೆಯರಿಗೆ ಈ ಕಿರಿಕಿರಿಯಿಂದ ಮುಕ್ತಿಕೊಡಿಸಲು ಮುಂಬೈ ಪೊಲೀಸರು ಸಜ್ಜಾಗಿದ್ದಾರೆ.