ಹೈದರಾಬಾದ್ ಪೊಲೀಸರಿಗೆ ತಲೆ ನೋವಾದ ಬಿಳಿ ಬಣ್ಣದ ಐ20 ಕಾರು, ಯಾಕೆ ಗೊತ್ತಾ?

ಹೈದರಾಬಾದ್ ಪೊಲೀಸರಿಗೆ ಹೂಂಡೈ ಸಂಸ್ಥೆಯ ಬಿಳಿ ಬಣ್ಣದ ಐ20 ಕಾರೊಂದು ತಲೆ ನೋವಾಗಿ ಪರಿಣಮಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ಹೈದರಾಬಾದ್ ಪೊಲೀಸರಿಗೆ ಹೂಂಡೈ ಸಂಸ್ಥೆಯ ಬಿಳಿ ಬಣ್ಣದ ಐ20 ಕಾರೊಂದು ತಲೆ ನೋವಾಗಿ ಪರಿಣಮಿಸಿದೆ. 
ಹೌದು, ಕಳ್ಳರ ಗುಂಪೊಂದು ಬಿಳಿ ಬಣ್ಣದ ಐ20 ಕಾರೊಂದನ್ನು ಬಳಸಿ ಕಳ್ಳತನಕ್ಕೆ ಮುಂದಾಗಿರುವುದು. ಕಳೆದ ಮೂರು ದಿನಗಳಲ್ಲಿ ಕದೀಮರು ನಗರದ ವಿವಿದೆಡೆ ಬೀಗ ಹಾಕಲಾಗಿರುವ ಮನೆಗಳಿಗೆ ಕನ್ನ ಹಾಕುತ್ತಿದ್ದಾರೆ. 
ಕಳ್ಳರು ತಮ್ಮ ಕೃತ್ಯಕ್ಕೆ ಒಂದೇ ಕಾರನ್ನು ಬಳಸುತ್ತಿದ್ದು ಅವರನ್ನು ಹಿಡಿಯುವ ಸಲುವಾಗಿ ಹೈದರಾಬಾದ್ ಪೊಲೀಸರು ಆ ಕಾರಿನ ಹಿಂದೆ ಬಿದ್ದಿದ್ದಾರೆ. ಒಟ್ಟಾರೆ 10 ಪ್ರಕರಣಗಳು ವರದಿಯಾಗಿದ್ದು ಸೈಬರಾಬಾದ್ ನಲ್ಲಿ ಆರು ಪ್ರಕರಣ, ರಾಚಕೊಂಡದಲ್ಲಿ ಮೂರು ಹಾಗೂ ಹೈದರಾಬಾದ್ ಆಯುಕ್ತರ ವ್ಯಾಪ್ತಿಯಲ್ಲಿ ಒಂದು ಪ್ರಕರಣ ವರದಿಯಾಗಿವೆ. 
ಸಿಸಿಟಿವಿಯಲ್ಲಿ ಕಾರಿನ ಓಡಾಟ ಸೆರೆಯಾಗಿದೆ. ಆದರೆ ನಕಲಿ ನೋಂದಣಿ ಸಂಖ್ಯೆಯನ್ನು ಕದೀಮರು ಬಳಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಈ ಕಾರು ಓಡಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಕದೀಮರು ಇಲ್ಲಿಯವರೆಗೂ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮನೆಗಳೇ ಇವರ ಟಾರ್ಗೆಟ್ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com