

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮನೆ ತೊರೆದು ಉಗ್ರ ಸಂಘಟನೆಗೆ ಸೇರಿದ್ದ ದ ಯುವಕನೋರ್ವ ವಾಪಾಸ್ ಮನೆ ಸೇರಿದ್ದಾನೆ.
ತನ್ನ ತಾಯಿಯ ಕೋರಿಕೆ ಮೇರೆಗೆ ಉಗ್ರರ ಗುಂಪಿನಿಂದ ಮರಳಿ ಮನೆಗೆ ವಾಪಾಸ್ಸಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ತಾಯಿಯ ಅಳುವಿಗೆ ಸ್ಪಂದಿಸಿ ಆತ ವಾಪಾಸ್ಸಾಗಿದ್ದಾನೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್. ಪಿ. ವಾಯಿದ್ ಹೇಳಿದ್ದಾರೆ. ಹಾಗೂ ಆತನ ಕುಟುಂಬಕ್ಕೆ ಶುಭಾಶಯ ಕೋರಿದ್ದಾರೆ. ಆದರೆ,ಆ ಯುವಕನ ವಯಸ್ಸಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಜಮ್ಮು-ಕಾಶ್ಮೀರದಲ್ಲಿನ ಹಿಂಸಾಚಾರದಿಂದಾಗಿ ನಾಲ್ವರು ಯುವಕರು ಉಗ್ರರ ಗುಂಪಿಗೆ ಸೇರಿದ್ದರು. 2017ರಂದು ಮತ್ತೆ ಮುಖ್ಯವಾಹಿನಿಗೆ ಮರಳಿದ್ದರು.