ಕೇರಳ ಕ್ಯಾಥೊಲಿಕ್ ಪಾದ್ರಿ ಹತ್ಯೆ ಪ್ರಕರಣ: ಆರೋಪಿ ಜಾನಿ ಬಂಧನ

ಕೇರಳದ ಮಲಯತ್ತೂರಿನ ಸೆಂಟ್ ಥಾಮಸ್ ಚರ್ಚ್ ನ ಹಿರಿಯ ಕ್ಯಾಥೊಲಿಕ್ ಪಾದ್ರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...
ಬಂಧಿತ ಆರೋಪಿ ಜಾನಿ
ಬಂಧಿತ ಆರೋಪಿ ಜಾನಿ
Updated on: 
ಕೊಚ್ಚಿ: ಕೇರಳದ ಮಲಯತ್ತೂರಿನ ಸೆಂಟ್ ಥಾಮಸ್  ಚರ್ಚ್ ನ ಹಿರಿಯ ಕ್ಯಾಥೊಲಿಕ್ ಪಾದ್ರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್‌ನ ಮಾಜಿ ಮೇಲ್ವಿಚಾರಕ ಜಾನಿ ವಟ್ಟೆಕಾದನ್ ಎಂಬ ವ್ಯಕ್ತಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಕ್ಯಾಥೊಲಿಕ್ ಪಾದ್ರಿ ಗ್ಸೇವಿಯರ್ ಥೇಲಕ್ಕಾಟ್ (52) ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜಾನಿಯನ್ಮು ಇಂದು ವಶಕ್ಕೆ ಪಡೆದಿದ್ದು, ವಿಚಾರಣೆ ಬಳಿಕ ಕೋರ್ಟ್ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗ್ಸೇವಿಯರ್ ಅವರು ಪವಿತ್ರ ಸ್ಥಳ ಕುರಿಸುಮುದೈಗೆ ಹೋಗುತ್ತಿದ್ದಾಗ ಹರಿತವಾದ ಆಯುಧದಿಂದ ಇರಿಯಲಾಗಿದೆ. ಈ ಹಿಂದೆ ಚರ್ಚಿನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಜಾನಿ ಎಂಬುವವರು ಈ ಕೃತ್ಯ ಮಾಡಿದ್ದಾರೆ. ಮೂರು ತಿಂಗಳುಗಳ ಹಿಂದೆ ಜಾನಿ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ನಂತರ ಕಣ್ಮರೆಯಾಗಿರುವ ಜಾನಿಗಾಗಿ ತೀವ್ರ ಶೋಧ ನಡೆಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com