ಸರಿಯಾಗಿ 'ನೋಡಿಕೊಳ್ಳದ' ಪತ್ನಿ, ವಿಚ್ಛೇದನ ಕೇಳಿದ ಪತಿ, 'ನೋ' ಎಂದ ನ್ಯಾಯಾಲಯ!

ತನ್ನ ಪತ್ನಿ ಬೆಳಗ್ಗೆ ಬೇಗ ಹೇಳುವುದಿಲ್ಲ, ಜತೆಗೆ ರುಚಿಕರವಾಗಿ ಅಡುಗೆ ಮಾಡಿಕೊಡುವುದಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯನ್ನು ಬಾಂಬೈ ಕೋರ್ಟ್ ವಜಾ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ತನ್ನ ಪತ್ನಿ ಬೆಳಗ್ಗೆ ಬೇಗ ಹೇಳುವುದಿಲ್ಲ, ಜತೆಗೆ ರುಚಿಕರವಾಗಿ ಅಡುಗೆ ಮಾಡಿಕೊಡುವುದಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯನ್ನು ಬಾಂಬೈ ಕೋರ್ಟ್ ವಜಾ ಮಾಡಿದೆ. 
ಅರ್ಜಿದಾರನು ವಿಚ್ಛೇದನ ಅರ್ಜಿಯಲ್ಲಿ ಪತ್ನಿಯ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾನೆ. ನನ್ನ ಪತ್ನಿ ಬೆಳಗ್ಗೆ ಬೇಗ ಹೇಳುವುದಿಲ್ಲ. ರುಚಿಯಾಗಿ ಅಡುಗೆ ಮಾಡುವುದಿಲ್ಲ. ನನ್ನ ಜತೆ ಹೆಚ್ಚು ಸಮಯ ಕಳೆಯುವುದಿಲ್ಲ. ನಾನು ಕೆಲಸದಿಂದ ಮನೆಗೆ ಬಂದರೆ ಒಂದು ಗ್ಲಾಸ್ ನೀರು ಸಹ ಕೊಡುವುದಿಲ್ಲ ಎಲ್ಲಾ ಕಾರಣಗಳಿಂದಾಗಿ ನನಗೆ ಪತ್ನಿಯಿಂದ ವಿಚ್ಛೇದನ ಕೊಡಿಸುವಂತೆ ಮನವಿ ಮಾಡಿದ್ದರು. 
ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ಬಾಂಬೈ ಕೋರ್ಟ್ ನ ನ್ಯಾಯಾಧೀಶರಾದ ಕೆಕೆ ಟಾಟೆಡ್ ಮತ್ತು ಸಾರಂಗ್ ಕೊತ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮೇಲಿನ ಆರೋಪಗಳನ್ನು ಪರಿಗಣಿಸಿ ವಿಚ್ಛೇದನ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. 
ಇಂತಹ ಆರೋಪಗಳು ಕ್ರೌರ್ಯದ ಪ್ರಮಾಣವಲ್ಲ. ಹೀಗಾಗಿ ಈ ಕಾರಣಗಳನ್ನು ಮುಂದಿಟ್ಟುಕೊಂಡು ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಇಂದು ಅರ್ಜಿದಾರ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. 
ವಾದ-ವಿವಾದಗಳನ್ನು ಆಲಿಸಿದ ನಂತರ ಬಾಂಬೈ ಹೈಕೋರ್ಟ್ ನ ನ್ಯಾಯಾಧೀಶರು ಅರ್ಜಿದಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನೇ ಎತ್ತಿಹಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com