
ನವದೆಹಲಿ: ರೈಲ್ವೆಯ ಬೋಗಿಗಳಲ್ಲಿ ಮಹಿಳಾ ಕೋಟಾದಡಿ ಬಳಕೆಯಾಗದಿರುವ ಸೀಟುಗಳನ್ನು ವೈಟಿಂಗ್ ಲೀಸ್ಟ್ ನಲ್ಲಿರುವ ಮಹಿಳಾ ಪ್ರಯಾಣಿಕರಿಗೆ ಮತ್ತು ಇನ್ನೂ ಸೀಟುಗಳು ಉಳಿದರೆ ಹಿರಿಯ ನಾಗರಿಕರಿಗೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಈ ವಿಷಯವನ್ನು ಸ್ವತಃ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಇಲ್ಲಿಯವರೆಗೆ ರಿಸರ್ವೇಶನ್ ಚಾರ್ಟ್ ತಯಾರಾಗುವವರೆಗೆ ಈ ಕೋಟಾದಡಿ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶವಿತ್ತು. ನಂತರ ಬಳಸದಿರುವ ಕೋಟಾವನ್ನು ವೈಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರಿಗೆ ನೀಡಲಾಗುತ್ತಿತ್ತು.
ಇನ್ನು ಮುಂದೆ ಈ ಕೋಟಾದಡಿ ಸೀಟುಗಳನ್ನು ವೈಟಿಂಗ್ ಲಿಸ್ಟ್ ನಲ್ಲಿರುವ ಮಹಿಳಾ ಪ್ರಯಾಣಿಕರಿಗೆ ನಂತರ ಸೀಟುಗಳು ಉಳಿದರೆ ಹಿರಿಯ ನಾಗರಿಕರಿಗೆ ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.
ಪ್ರಸ್ತುತ ಎಲ್ಲಾ ರೈಲುಗಳಲ್ಲಿ ಮೀಸಲಾತಿಯ ಸ್ಲೀಪರ್ ಸೀಟುಗಳು 6 ಲೋವರ್ ಬರ್ತ್ ಗಳು ಮತ್ತು ಎಸಿ3-ಟೈರ್ ಮೂರು ಲೋವರ್ ಬರ್ತ್ ಗಳು ಮತ್ತು ಎಸಿ 2-ಟೈರ್ ಕೋಚ್ ಗಳು ಹಿರಿಯ ನಾಗರಿಕರಿಗೆ, 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮತ್ತು ಗರ್ಭಿಣಿಯರಿಗೆ ಮೀಸಲಿಡಲಾಗಿದೆ.
Advertisement