ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತ-ಸೇಶೆಲ್ಸ್ ನಡುವೆ ಜಂಟಿ ಸಮರಾಭ್ಯಾಸ ಲಮಿಟಿ

ಭಾರತ ಮತ್ತು ದ್ವೀಪರಾಷ್ಟ್ರ ಸೇಶೆಲ್ಸ್ ನಡುವೆ ಜಂಟಿ ಮಿಲಿಟರಿ ಅಭ್ಯಾಸ 'ಲಮಿಟಿಯನ್ನು ಭಾರತದ ....
Published on

ನವದೆಹಲಿ: ಭಾರತ ಮತ್ತು ದ್ವೀಪರಾಷ್ಟ್ರ ಸೇಶೆಲ್ಸ್ ನಡುವೆ ಜಂಟಿ ಮಿಲಿಟರಿ ಅಭ್ಯಾಸ 'ಲಮಿಟಿಯನ್ನು ಭಾರತದ ಹೈಕಮಿಷನರ್ ಡಾ.ಔಸಫ್ ಸಯೀದ್ ಮತ್ತು ಸೇಶೆಲ್ಸ್ ನ ಪೀಪಲ್ಸ್ ಡಿಫೆನ್ಸ್ ಪಡೆಯ ಉಪ ಮುಖ್ಯಸ್ಥ ಕರ್ನಲ್ ಕ್ಲಿಫ್ಫೊರ್ಡ್ ರೊಸಲಿನ್ ಸಮ್ಮುಖದಲ್ಲಿ ನಡೆಸಲಾಯಿತು.

ಜಂಟಿ ಸಮರಾಭ್ಯಾಸ ಲಮಿಟೆ ಎಂದು ಹೆಸರಿಡಲಾಗಿದ್ದು ಇದರ ಅರ್ಥ ಸ್ನೇಹತ್ವ ಎಂಬುದಾಗಿದೆ. ದ್ವೀಪರಾಷ್ಟ್ರದೊಂದಿಗೆ ಇದು ಸರಣಿ ದ್ವಿಪಕ್ಷೀಯ ಸಮರಾಭ್ಯಾಸದಲ್ಲಿ 8ನೆ ಸಲವಾಗಿದೆ.

2001ರಿಂದ ಭಾರತ ಮತ್ತು ಸೇಶೆಲ್ಸ್ ಜಂಟಿ ಸಮರಾಭ್ಯಾಸವನ್ನು ನಡೆಸಿಕೊಂಡು ಬಂದಿದ್ದು ಮಿಲಿಟರಿ ಸಹಕಾರ ವಿಸ್ತರಣೆಗೆ ಮತ್ತು ಎರಡು ದೇಶಗಳ ಸೈನ್ಯಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆಗೆ ನಡೆಸಲಾಗುತ್ತಿದೆ.

ಉಗ್ರರು ಮತ್ತು ಬಂಡುಕೋರರ ಒಳನುಸುಳುವಿಕೆಯನ್ನು ತಡೆಯಲು ಈ ಜಂಟಿ ಸಮರಾಭ್ಯಾಸ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com