ಈಶಾನ್ಯ ರಾಜ್ಯಗಳ ಚುನಾವಣೆ: ಮೌನ ಮುರಿದ ರಾಹುಲ್; ಜನತೆಯ ವಿಶ್ವಾಸ ಮರಳಿ ಪಡೆಯುವುದಾಗಿ ಹೇಳಿಕೆ

ಈಶಾನ್ಯ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಎಐಸಿಸಿ ರಾಹುಲ್ ಗಾಂಧಿ ಮೌನ ಮುರಿದಿದ್ದು, ಆ ರಾಜ್ಯಗಳ ಜನರ ಆಜ್ಞೆಯನ್ನು ಗೌರವಿಸುತ್ತೇನೆ. ಮರಳಿ ಜನರ ವಿಶ್ವಾಸ ಗಳಿಸಲು ಬದ್ಧವಿರುವುದಾಗಿ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ದೆಹಲಿ: ಈಶಾನ್ಯ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಎಐಸಿಸಿ ರಾಹುಲ್ ಗಾಂಧಿ ಮೌನ ಮುರಿದಿದ್ದು, ಆ ರಾಜ್ಯಗಳ ಜನರ ಆಜ್ಞೆಯನ್ನು ಗೌರವಿಸುತ್ತೇನೆ. ಮರಳಿ ಜನರ ವಿಶ್ವಾಸ ಗಳಿಸಲು ಬದ್ಧವಿರುವುದಾಗಿ ಹೇಳಿದ್ದಾರೆ.

ತ್ರಿಪುರಾ,ಮೇಘಾಲಯ, ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಎರಡು ದಿನಗಳ ನಂತರ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು,ಈಶಾನ್ಯ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುವುದಾಗಿ ರಾಹುಲ್ ಗಾಂಧಿ ಟ್ವೀಟರ್ ಸಂದೇಶದಲ್ಲಿ ತಿಳಿಸಿದ್ದಾರೆ.


ತ್ರಿಪುರಾ , ಹಾಗೂ ನಾಗಲ್ಯಾಂಡ್ ನಲ್ಲಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಮೇಘಾಲಯದಲ್ಲಿ 21 ಸ್ಥಾನಗಳನ್ನು ಪಡೆದಿದ್ದರೂ ಸರ್ಕಾರ ರಚಿಸುವಷ್ಟು ಬಲ ಪಡೆದಿಲ್ಲ. ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲು ಶತಪ್ರಯತ್ನ ನಡೆಸುತ್ತಿದೆ.

ಕಾಂಗ್ರೆಸ್ ಹಿರಿಯ ನಾಯಕರಾದ ಕಮಲ್ ನಾಥ್ ಹಾಗೂ ಅಹ್ಮದ್ ಪಟೇಲ್ ಶಿಲ್ಲಾಂಗ್ ಗೆ ತೆರಳಿದ್ದು, ಪ್ರಾದೇಶಿಕ ಪಕ್ಷಗಳ ಮುಖಂಡರೊಂದಿಗೆ ಸತತ ಸಮಾಲೋಚನೆ ನಡೆಸುತ್ತಿದ್ದಾರೆ. ಆದರೆ, ನಿರೀಕ್ಷಿತ ಫಲ ನೀಡಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com