
ಚೆನ್ನೈ: ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯದಲ್ಲಿಸಂಚಲನ ಮೂಡಿಸುತ್ತಿದ್ದಾರೆ.
ತಲೈವಾ ನಿನ್ನೆ ಮಾಡಿದ ರಾಜಕೀಯ ಭಾಷಣ ಕೇಳಲು ಸೇರಿದ್ದ ಜನಸ್ತೋಮ ಕಂಡು ಎಐಎಡಿಎಂಕೆ ಸದಸ್ಯರು ದಂಗಾಗಿ ಹೋಗಿದ್ದಾರೆ.
ಸುಮಾರು 25 ರಿಂದ 30 ಲೋಕಸಭಾ ಸದಸ್ಯರು ರಜನಿ ರಾಜಕೀಯ ಪ್ರವೇಶ ಕುರಿತ ಮಾತುಗಳನ್ನ ಕೇಳಿದ್ದಾರೆ. ರಜನಿ ಭಾಷಣ ತಮ್ಮ ಕ್ಷೇತ್ರದಲ್ಲಿ ಮತದಾರರ ಮೇಲೆ ಪರಿಣಾಮ ಬೀರಿದರೆ ಗತಿ ಏನು ಎಂಬ ಚಿಂತೆಯಲ್ಲಿದ್ದಾರೆ.
ತಮಿಳುನಾಡಿನ ಪ್ರತಿಯೊಂದು ಲೋಕಸಭಾ ಕ್ಷೇತ್ರದಿಂದಲೂ ಸುಮಾರು 50 ಸಾವಿರ ಎಐಎಡಿಎಂಕೆ ಮತದಾರರು ರಜನಿ ಪಕ್ಷದತ್ತ ಜಿಗಿಯುವ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿವೆ.
ಟಿವಿಗಳಲ್ಲಿ ರಜನಿ ಭಾಷಣ ಕೇಳಿದ ಎಐಎಡಿಎಂಕೆಯ ಹಿರಿಯ ಸದಸ್ಯರೊಬ್ಬರು ತಮಗೆ ಇದೇ ಮೊದಲ ಹಾಗೂ ಕೊನೆಯ ಚುನಾವಣೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement