ಪೆರಿಯಾರ್ ಪ್ರತಿಮೆಗೆ ಹಾನಿ: ತಮಿಳುನಾಡಿನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ!

ಪೆರಿಯಾರ್ ಕುರಿತಂತೆ ಬಿಜೆಪಿ ಮುಖಂಡನ ಪ್ರಚೋದನಾತ್ಮಕ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.
ಹಾನಿಗೀಡಾದ ಬಿಜೆಪಿ ಕಚೇರಿ
ಹಾನಿಗೀಡಾದ ಬಿಜೆಪಿ ಕಚೇರಿ
ಕೊಯಮತ್ತೂರು: ಪೆರಿಯಾರ್ ಕುರಿತಂತೆ ಬಿಜೆಪಿ ಮುಖಂಡನ ಪ್ರಚೋದನಾತ್ಮಕ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದು, ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಇಬ್ಬರು ದುಷ್ಕರ್ಮಿಗಳು ಕಚೇರಿ ಬಳಿ ಆಗಮಿಸಿ ತಾವು ತಂದಿದ್ದ ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಓರ್ವ ಪೊಲೀಸ್ ಪೇದೆ ದುಷ್ಕರ್ಮಿಗಳನ್ನು ಹಿಡಿಯಲು ಪ್ರಯತ್ನಿಸಿದರಾದರೂ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಇನ್ನು ನಿನ್ನೆಯಷ್ಟೇ ತಮಿಳುನಾಡು ಬಿಜೆಪಿ ನಾಯಕ ಎಚ್ ರಾಜಾ ಅವರು ಸಾಮಾಜಿಕ ತಾಣದಲ್ಲಿ  ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸವಾದಂತೆ ತಮಿಳುನಾಡಿನ ವಿಚಾರವಾದಿಗಳ ಪ್ರತಿಮೆಗಳು ನೆಲಕ್ಕುರುಳಲಿವೆ ಎಂದು ಹೇಳಿದ್ದರು. ತ್ರಿಪುರಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿ  ಲೆನಿನ್ ಪ್ರತಿಮೆಗೆ ಆದ ಗತಿಯೇ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಗೆ ಆಗಲಿದೆ ಎಂದು ಎಚ್. ರಾಜಾ ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದರು.  ಅಲ್ಲದೆ ಪೆರಿಯಾರ್ ಒಬ್ಬ ಜಾತಿವಾದಿ, ಅವರ ಪ್ರತಿಮೆಯನ್ನ ಕಿತ್ತೊಗೆಯಬೇಕೆಂದು ಎಂದು ಉಲ್ಲೇಖಿಸಿದ್ದರು. 
ಪೋಸ್ಟ್ ಹಾಕಿದ ನಂತರ ಇಬ್ಬರು ದುಷ್ಕರ್ಮಿಗಳು ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ವೆಲ್ಲೋರ್ ನಗರ ಪಾಲಿಕೆ ಕಚೇರಿಯಲ್ಲಿರುವ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಿದಿದರು. ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಗಳನ್ನು ಮುತ್ತುರಾಮನ್ ಮತ್ತು ಫ್ರಾನ್ಸಿಸ್ ಎಂದು ಗರುತಿಸಲಾಗಿದ್ದು, ಕುಡಿತದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com