ನವದೆಹಲಿ: ಅಧಿಕಾರಯುತ ನಾಗರಿಕ ಪ್ರಜಾಪ್ರಭುತ್ವದ ಬಲಿಷ್ಠ ಆಧಾರ ಸ್ತಂಭ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಕೇಂದ್ರ ಮಾಹಿತಿ ಆಯೋಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಕೇಳುವುದು, ಆಲಿಸುವುದು, ಸಂವಾದ, ಕಾಯ್ದೆ ಮತ್ತು ಮಾಹಿತಿ ಆಧುನಿ ಮಾಹಿತಿಯ ಐದು ಆಧಾರ ಸ್ತಂಭಗಳು ಎಂದಿದ್ದಾರೆ.
ಕೇಂದ್ರ ಮಾಹಿತಿ ಆಯೋಗ ಜನರಿಗೆ ತೃಪ್ತಿಯಾಗುವಂತೆ ತನ್ನ ವ್ಯವಸ್ಥೆಯಲ್ಲಿ ಸುಧಾರಣೆ ತರಲಿದೆ ಎಂದು ನಾನು ನಂಬಿದ್ದೇನೆ ಎಂದರು.
ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸರ್ಕಾರ ಜನರನ್ನು ಅಧಿಕಾರಯುತರನ್ನಾಗಿ ಮಾಡಲು ಶ್ರಮಿಸುತ್ತಿದೆ. ಮೊದಲು ನಮ್ಮ ಯೋಜನೆಗಳ ಬಗ್ಗೆ ಜನ ಕೇಳಬೇಕು ಮತ್ತು ಆಯೋಜನೆಗಳಿಗೆ ಆಧ್ಯತೆ ನೀಡಬೇಕು ಎಂದರು.