ನಾಗಾಲ್ಯಾಂಡ್ ನೂತನ ಸಿಎಂ ಆಗಿ ನೀಫಿಯು ರಿಯೊ ಪ್ರಮಾಣ ವಚನ ಸ್ವೀಕಾರ

ನಾಗ್ಯಾಲ್ಯಾಂಡ್ ನ ನೂತನ ಸಿಎಂ ಆಗಿ ನೀಫಿಯು ರಿಯೊ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರತಿಜ್ಞಾವಿಧಿ ಸ್ವೀಕರಿಸಿದ ಸಿಎಂ ನೀಫಿಯು ರಿಯೊ
ಪ್ರತಿಜ್ಞಾವಿಧಿ ಸ್ವೀಕರಿಸಿದ ಸಿಎಂ ನೀಫಿಯು ರಿಯೊ
ಕೊಹಿಮಾ: ನಾಗ್ಯಾಲ್ಯಾಂಡ್ ನ ನೂತನ ಸಿಎಂ ಆಗಿ ನೀಫಿಯು ರಿಯೊ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನೀಫಿಯು ರಿಯೊ ಅವರೊಂದಿಗೆ 11 ಶಾಸಕರೂ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ನಾಗಾಲ್ಯಾಂಡ್ ರಾಜ್ಯಪಾಲರಾದ ಪದ್ಮನಾಭ ಆಚಾರ್ಯ ಅವರು ಶಾಸಕರು ಮತ್ತು ನೀಫಿಯು ರಿಯೋ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಆ ಮೂಲಕ ನೀಫಿಯು ರಿಯೊ ರಾಜಭವನದ ಹೊರಗೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಸಿಎಂ ಎಂಬ ಹೆಸರಿಗೆ ರಿಯೊ ಭಾಜನರಾಗಿದ್ದಾರೆ.

ಇಂದು ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು, ಸೇರಿದಂತೆ ಬಿಜೆಪಿ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು. 

ಇತ್ತೀಚೆಗೆ ನಡೆದ ನಾಗ್ಯಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಎನ್ ಡಿಪಿಪಿ ಮೈತ್ರಿಕೂಟ 32 ಸ್ಥಾನಗಳಲ್ಲಿ ಜಯಗಳಿಸಿತ್ತು, ಎನ್ ಪಿಎಫ್ 23 ಸ್ಥಾನಗಳಲ್ಲಿ ಜಯಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com