ನವದೆಹಲಿ: ಕೇಂದ್ರದ ಎನ್ ಡಿಎ ಮೈತ್ರಿಕೂಟದಿಂಡ ಟಿಡಿಪಿ ಸಂಸದರು ಹೊರ ಹೋಗುವ ನಿರ್ಧಾರ ಪ್ರಕಟಿಸಿದ ಒಂದು ದಿನದ ತರುವಾಯ ಪ್ರಧಾನಿ ಮೋದಿ ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಡನೆ ಮಾತುಕತೆ ನಡೆಸಿದ್ದಾರೆ.
ಇಂದು ಸಂಜೆ ಆರು ಗಂಟೆಗೆ ಕೇಂದ್ರ ಸಂಪುಟ ಸದಸ್ಯರಾದ ಇಬ್ಬರು ಟಿಡಿಪಿ ಸಂಸದರು ಪ್ರಧಾನಿಗಳನ್ನು ಭೇಟಿ ಆಗಲಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತ ಪಡಿಸಿದೆ.
ನಿನ್ನೆ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದಿಂದ ತನ್ನ ಸಂಸದರನ್ನು ಹಿಂದೆ ಕರೆಸಿಕೊಳ್ಳುವುದಾಗಿ ಟಿಡಿಪಿ ಘೋಷಿಸಿತ್ತು.
ಮೋದಿ ಸಂಪುಟದ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ ಎಸ್ ಚೌಧರಿ ಅವರುಗಳು ಟಿಡಿಪಿ ಸಚಿವರುಗಳಾಗಿದಾರೆ.