2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿದ ಎಲ್ಲಾ ಕೇಸುಗಳ ವಿಚಾರಣೆಯನ್ನು 6 ತಿಂಗಳಲ್ಲಿ ಮುಗಿಸಿ: ಸುಪ್ರೀಂ ಆದೇಶ

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಕೇಸುಗಳ ವಿಚಾರಣೆಯನ್ನು ಇನ್ನು ಆರು ತಿಂಗಳೊಳಗೆ ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಕೇಸುಗಳ ವಿಚಾರಣೆಯನ್ನು ಇನ್ನು ಆರು ತಿಂಗಳೊಳಗೆ ಮುಗಿಸಬೇಕೆಂದು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸುಮಾರು 7 ವರ್ಷಗಳ ಕಾಲ ಕೇಸಿನ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯ, ಕಳೆದ ಡಿಸೆಂಬರ್ 21ರಂದು ಡಿಎಂಕೆ ನಾಯಕರಾದ ಎ.ರಾಜಾ, ಕನ್ನಿಮೋಳಿ ಮತ್ತು ಇತರ 15 ಮಂದಿಯನ್ನು ಖುಲಾಸೆಗೊಳಿಸಿತ್ತು.

ಇದಕ್ಕೂ ಮುನ್ನ ಕಳೆದ ಫೆಬ್ರವರಿ 16ರಂದು ನೀಡಿದ ಅಧಿಕೃತ ನೊಟೀಸ್ ನಲ್ಲಿ, ಕೇಂದ್ರ ಸರ್ಕಾರ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು 2ಜಿ ಸ್ಟೆಕ್ಟ್ರಂ ಕೇಸಿನ ವಿಚಾರಣೆ ನಡೆಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿದೆ ಎಂದು ತಿಳಿಸಿತ್ತು. 2014ರಲ್ಲಿ ನೇಮಕಗೊಂಡ ಆನಂದ್ ಗ್ರೋವರ್ ಅವರ ಬದಲಿಗೆ ತುಷಾರ್ ಮೆಹ್ತಾ ನೇಮಕಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com