ನಿಮಗೆ ಸ್ವಾಗತ, ಆದರೆ ನಿಮ್ಮ ಹೇಳಿಕೆಗೆ ಅಲ್ಲ: ಬಿಜೆಪಿ ಸೇರಿದ ನರೇಶ್ ಅಗರ್ವಾಲ್ ಕುರಿತು ಸುಷ್ಮಾ ಸ್ವರಾಜ್

ನರೇಶ್ ಅಗರ್ವಾಲ್ ಬಿಜೆಪಿ ಸೇರಿದ್ದಾರೆ, ಅವರಿಗೆ ಸ್ವಾಗತ ಕೋರುತ್ತೇನೆ. ಆದರೆ ಜಯಾ ಬಚ್ಚನ್ ಕುರಿತಂತೆ ಅವರ ಟೀಕೆಯ ಮಾತುಗಳು ಅಸಮರ್ಪಕವಾಗಿದ್ದು, ಸ್ವೀಕಾರಾರ್ಹವಾಗಿಲ್ಲ’
ಸುಷ್ಮಾ ಸ್ವರಾಜ್,
ಸುಷ್ಮಾ ಸ್ವರಾಜ್,
Updated on: 
ನವದೆಹಲಿ: "ನರೇಶ್ ಅಗರ್ವಾಲ್ ಬಿಜೆಪಿ ಸೇರಿದ್ದಾರೆ, ಅವರಿಗೆ ಸ್ವಾಗತ ಕೋರುತ್ತೇನೆ. ಆದರೆ ಜಯಾ ಬಚ್ಚನ್ ಕುರಿತಂತೆ ಅವರ ಟೀಕೆಯ ಮಾತುಗಳು ಅಸಮರ್ಪಕವಾಗಿದ್ದು, ಸ್ವೀಕಾರಾರ್ಹವಾಗಿಲ್ಲ’ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸಮಾಜವಾದಿ ಪಕ್ಷದಿಂಡ ರಾಜ್ಯ ಸಭೆಗೆ ಅಭ್ಯರ್ಥಿಯಾಗುವ ಅವಕಾಶವನ್ನು ತಪ್ಪಿಸಿಕೊಂಡಿದ್ದ ನರೇಶ್ ಅಗರ್ವಾಲ್ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಸುಷ್ಮಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಅದೇ ಟ್ವೀಟ್ ನಲ್ಲಿ ಅಗರ್ವಾಲ್ ಹಿಂದೆ ಜಯಾ ಬಚ್ಚನ್ ಬಗೆಗೆ ಆಡಿದ್ದ ಮಾತುಗಳು ತಪ್ಪು ಎಂದೂ ಎಚ್ಚರಿಸಿದ್ದಾರೆ.
ಸಮಾಜವಾದಿ ಪಕ್ಷವು ಅಗರ್ವಾಲ್ ಬದಲಿಗೆ ಜಯಾ ಬಚ್ಚನ್ ಅವರಿಗೆ ರಾಜ್ಯಸಭೆ ಟಿಕೆಟ್ ನಿಡಿತ್ತು. ಇದಕ್ಕೆ ಪ್ರತಿಕ್ರಯಿಸಿದ ನರೇಶ್ ಅಗರ್ವಾಲ್ ’ಚಲನಚಿತ್ರಗಳಲ್ಲಿ ನೃತ್ಯ ಮಾಡುವ, ನಟನೆ ಮಾಡುವವರನ್ನು ಬೆಂಬಲಿಸಿದ ಪಕ್ಷ ನನ್ನನ್ನು ಕಡೆಗಣಿಸಿತು’ ಎಂದಿದ್ದರು.
ಬಿಜೆಪಿ ವಕ್ತಾರರಾದ ಸಂಬಿತ್ ಪಾತ್ರಾ ಮಾತನಾಡಿ ನಮ್ಮ ಪಕ್ಷವು ಎಲ್ಲಾಕ್ಷೇತ್ರಗಳ ಜನರನ್ನು ಗೌರವಿಸಲಿದೆ. ರಾಜಕೀಯಕ್ಕೆ ಅವರನ್ನು ಸ್ವಾಗತಿಸುತ್ತದೆ ''ಎಂದರು. ಈ ಮೂಲಕ ಅಗರ್ವಾಲ್ ಹೇಳಿಕೆಗೆ, ಬಿಜೆಪಿಗೆ ಯಾವ ಸಂಬಂಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com