ಬ್ರಿಟನ್ 150 ವರ್ಷಗಳಲ್ಲಿ ಸಾಧಿಸಿದ್ದನ್ನು ಭಾರತ ಕೇವಲ 30 ವರ್ಷಗಳಲ್ಲಿ ಸಾಧಿಸಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಕ್ರುಗ್ಮನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಇತ್ತೀಚಿನ ದಿನಗಳಲ್ಲಿ ಉದ್ಯಮ ನಡೆಸುವುದಕ್ಕೆ ಉತ್ತಮವಾದ ದೇಶವಾಗಿದ್ದು ಬ್ರಿಟನ್ 150 ವರ್ಷಗಳಲ್ಲಿ ಸಾಧಿಸಿದ್ದನ್ನು ಭಾರತ ಕೇವಲ 30 ವರ್ಷಗಳಲ್ಲಿ ಸಾಧಿಸಿದೆ, ಆದರೆ ಭಾರತದಲ್ಲಿ ಆರ್ಥಿಕ ಅಸಮಾನತೆ ಇದೆ ಎಂದು ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜಪಾನ್ ನ್ನು ಹಿಂದಿಕ್ಕಿ ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು 1990 ರಲ್ಲಿ ಕೈಗೊಳ್ಳಲಾದ ಉದಾರೀಕರಣ ನೀತಿ ಇದಕ್ಕೆ ಪೂರಕವಾಗಿ ಕೆಲಸ ಮಾಡಿದೆ ಎಂದು ಕ್ರುಗ್ಮನ್ ಹೇಳಿದ್ದಾರೆ.