ರೋಹಿಂಗ್ಯಾ ನಿರಾಶ್ರಿತರಿಗೆ ಉತ್ತಮ ಆರೋಗ್ಯ, ಶಿಕ್ಷಣ, ಸೌಲಭ್ಯ ಕುರಿತ ಅರ್ಜಿ : ಮಧ್ಯಂತರ ಆದೇಶ ನೀಡಲು ಸುಪ್ರೀಂ ನಕಾರ

ರೋಹಿಂಗ್ಯಾ ನಿರಾಶ್ರಿತರು ಉತ್ತಮ ಆರೋಗ್ಯ, ಶಿಕ್ಷಣ ಸೌಲಭ್ಯ ಒದಗಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗೆ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ರೋಹಿಂಗ್ಯಾ ನಿರಾಶ್ರಿತರು
ರೋಹಿಂಗ್ಯಾ ನಿರಾಶ್ರಿತರು

ನವದೆಹಲಿ: ರೋಹಿಂಗ್ಯಾ ನಿರಾಶ್ರಿತರು ಉತ್ತಮ ಆರೋಗ್ಯ, ಶಿಕ್ಷಣ ಸೌಲಭ್ಯ ಒದಗಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗೆ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಹಾಗೂ ನ್ಯಾ. ಎ.ಎಂ. ಖನ್ವೀಲ್ ಕರ್ ಮತ್ತು ಡಿ. ವೈ. ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ, ಮೂಲನಿವಾಸಿಗಳು, ವಲಸಿಗರು ಎಂಬ ತಾರತಾಮ್ಯ ನೀತಿ ಅನುಸರಿಸದೆ ಎಲ್ಲರಿಗೂ ಆರೋಗ್ಯ, ಶಿಕ್ಷಣ, ಸೌಲಭ್ಯ ಒದಗಿಸುವಂತೆ ಕೇಂದ್ರಸರ್ಕಾರ ಸೂಚನೆ ನೀಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಂಗ್ಯಾ ನಿರಾಶ್ರಿತರಿಗೆ ಯಾವುದೇ ಮಧ್ಯಂತರ ಆದೇಶ ನೀಡುವುದಕ್ಕೆ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

 ಇದಕ್ಕೂ ಮುನ್ನ ರೊಹಿಂಗ್ಯಾ ನಿರಾಶ್ರಿತರ ಪ್ರಸ್ತುತ ಸ್ಥಿತಿಗತಿಗಳ ಕುರಿತು ’ಸ್ಥಿತಿ ವರದಿ’ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು .

ನಿರಾಶ್ರಿತ ಶಿಬಿರದ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಅಲ್ಲದೆ ಮೂಲ ಸೌಕರ್ಯಗಳೂ ಇಲ್ಲದೆ ಅನಾರೋಗ್ಯಕರವಾಗಿದೆ ಎಂದು ವಿವರಿಸಿ ಹಿರಿಯ ವಕೀಲರಾದ ಕಾಲಿನ್ ಗೊನ್ಸಾಲ್ವ್ಸಾ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು.

ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರ, ಹರಿಯಾಣ ಹಾಗು ರಾಜಸ್ಥಾನ ರಾಜ್ಯಗಳು ನಿರಾಶ್ರಿತ್ತ ಶಿಬಿರಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ನ್ಯಾಯಾಲಯ ಆದೇಶ ನೀಡಬೇಕೆಂದು ಕೋರಿ ಇನ್ನೋರ್ವ ಹಿರಿಯ ವಕೀಲ  ಜಾಫರ್ ಉಲ್ಲಾಹ್ ಮನವಿ  ಸಲ್ಲಿಸಿದ್ದರು.

ಮ್ಯಾನ್ಮಾರ್ ನ ಪಶ್ಚಿಮ ರಾಖಿನ್ ರಾಜ್ಯದಲ್ಲಿ ನಡೆದ ಹಿಂಸಾಚಾರದ ಬಳಿಕ ಭಾರತಕ್ಕೆ ವಲಸೆ ಬಂದಿದ್ದ ರೊಹಿಂಗ್ಯಾ ಮುಸಲ್ಮಾನರು ಜಮ್ಮು, ಹೈದರಾಬಾದ್, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲಿ ನೆಲೆಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com