ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಮ್ಮ ಸಂಕಲ್ಪ: ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬುಧವಾರ ಹೇಳಿದ್ದಾರೆ...
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್
Updated on: 
ಛತಾರ್ಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬುಧವಾರ ಹೇಳಿದ್ದಾರೆ. 
ಛತಾರ್ಪುರದ ಮೌಸಹಾನಿಯಾದಲ್ಲಿ ಮಹಾರಾಜ ಛತ್ರಾಸಲ್ ಅವರ 52 ಅಡಿ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಮಾತನಾಡಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ ನಮ್ಮ ಬಯಕೆಯಷ್ಟೇ ಅಲ್ಲ, ನಮ್ಮ ಸಂಕಲ್ಪವಾಗಿದೆ. ರಾಮ ಮಂದಿರ ನಿರ್ಮಾಣ ಮಾಡಲು ಬಯಸುವವರು ರಾಮನ ಹಾದಿಯಂತೆ ಅನುಸರಿಸಬೇಕು ದು ಹೇಳಿದ್ದಾರೆ. 
ಮಹಾರಾಜ ಛತ್ರಾಸಾಲ್ ಅವರು ತಮ್ಮ ಸಣ್ಣ ಸೈನ್ಯದ ಸಹಾಯದೊಂದಿಗೆ ಶತ್ರುಗಳನ್ನು ಮಣಿಸಿದ ಕೆಚ್ಚೆದೆಯ ಯೋಧರಾಗಿದ್ದಾರೆ ಎಂದಿರುವ ಅವರು, ಮರಾಠರ ರಾಜ ಛತ್ರಪತಿ ಶಿವಾಜಿಯವರೊಂದಿಗಿನ ಮಹಾರಾಜ ಛತ್ರಸಾಲ್ ಅವರ ಒಡನಾಟಗಳನ್ನು ಇದೇ ವೇಳೆ ನೆನಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com