

ರಾಮೇಶ್ವರಂ : ಕಟ್ಚಾಥಿವೂ ದ್ವಿಪ್ರದೇಶ ಬಳಿ ಅಂತಾರಾಷ್ಟ್ರೀಯ ಜಲ ಮಾರ್ಗ ಉಲ್ಲಂಘನೆ ಆರೋಪದ ಮೇರೆಗೆ ತಮಿಳುನಾಡಿನ ಸುಮಾರು 2 ಸಾವಿರಕ್ಕೂ ಮೀನುಗಾರರನ್ನು ಶ್ರೀಲಂಕಾ ನೌಕಾ ಸಿಬ್ಬಂದಿ ಅಟ್ಟಾಡಿಸಿದ್ದಾರೆ ಎಂದು ಮೀನುಗಾರರ ಸಂಘದ ಮುಖಂಡರು ಹೇಳಿದ್ದಾರೆ.
ಕಟ್ಚಾಥಿವೂ ದ್ವಿಪ್ರದೇಶದಲ್ಲಿ ನಿನ್ನೆ ದಿನ 565 ಬೋಟುಗಳಲ್ಲಿ ತೆರಳಿದ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿರಬೇಕಾದರೆ ಅಲ್ಲಿಗೆ ಬಂದ ಶ್ರೀಲಂಕಾ ನೌಕೆಯ ಸಿಬ್ಬಂದಿ 30 ಬೋಟುಗಳಲ್ಲಿದ್ದ ಮೀನುಗಾರಿಕೆಗೆ ಬಳಸುವ ಪರದೆಯನ್ನು ಹರಿದು ಹಾಕಿದ್ದಾರೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಎಸ್. ಎಮಿರಿಟ್ ಆರೋಪಿಸಿದ್ದಾರೆ.
ಕಟ್ಚಾಥಿವೂ ದ್ವಿಪ್ರದೇಶದಲ್ಲಿ ಭಾರತೀಯ ಮೀನುಗಾರರು ಮೀನುಗಾರಿಕೆ ನಡೆಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದೇ ತಿಂಗಳ 3 ರಂದು ರಾಮೇಶ್ವರಂನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 2500 ಮೀನುಗಾರರನ್ನು ತಮಿಳುನಾಡು ನೌಕಾಯಾನ ಸಿಬ್ಬಂದಿ ಓಡಿಸಿದ್ದರು.