ರಾಮ ನವಮಿ ವೇಳೆ ಹಿಂಸಾಚಾರ: ವರದಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಸೂಚನೆ

ರಾಮ ನವಮಿ ಹಬ್ಬದ ದಿನದಂದು ರಾಣಿಗಂಜ್ ನಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರಕರಣ ಸಂಬಂಧ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬುಧವಾರ ಸೂಚನೆ ನೀಡಿದೆ...
ರಾಮ ನವಮಿ ವೇಳೆ ರಾಣಿಗಂಜ್'ನಲ್ಲಿ ಹಿಂಸಾಚಾರ
ರಾಮ ನವಮಿ ವೇಳೆ ರಾಣಿಗಂಜ್'ನಲ್ಲಿ ಹಿಂಸಾಚಾರ
ನವದೆಹಲಿ; ರಾಮ ನವಮಿ ಹಬ್ಬದ ದಿನದಂದು ರಾಣಿಗಂಜ್ ನಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರಕರಣ ಸಂಬಂಧ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬುಧವಾರ ಸೂಚನೆ ನೀಡಿದೆ. 
ಹಿಂಸಾಚಾರ ಪ್ರಕರಣ ಕುರಿತಂತೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಾಗೂ ತಪ್ಪಿತಸ್ಥರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯ ವಿದೇಶಾಂಗ ಸಚಿವಾಲಯದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ. 
ಪಶ್ಚಿಮ ಬಂಗಾಳ ರಾಜ್ಯದ ಜಿಲ್ಲೆಯಲ್ಲಿ ಹಿಂಸಾಚಾರ ಹಾಗೂ ಅಹಿತಕರ ವಾತಾವರಣ ಮುಂದುವರೆದಿದ್ದೇ ಅರೆಸೇನಾ ಪಡೆಗಳನ್ನು ಕಳುಹಿಸಿಕೊಡುವುದಾಗಿಯೂ ಕೇಂದ್ರ ತಿಳಿಸಿದೆ ಎಂದು ತಿಳಿಸಿದ್ದಾರೆ. 
ಪಶ್ಚಿಮ ಬಂಗಾಳದ ಪರುಲಿಯಾ, ಮುರ್ಶಿದಾಬಾದ್, ಬರ್ಧ್ಮಾನ್ ಮತ್ತು ರಾಣಿಗಂಜ್ ನಲ್ಲಿ ರಾಮ ನವಮಿ ಹಬ್ಬದ ದಿನಾಚರಣೆ ವೇಳೆ ಘರ್ಷಣೆ ಏರ್ಪಟ್ಟಿತ್ತು. ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, 12 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ರಾಣಿಗಂಜ್ ನಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ಹಲವು ಪೊಲೀಸರು ಗಾಯಗೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೈಕಳೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com