ವಾಯುವ್ಯ ಮುಂಬೈನ ಬೊರಿವಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯರು ತಿಳಿಸಿರುವಂತೆ ನೀರಿನ ಪೈಪ್ ಒಡೆದಿತ್ತು. ಇದು ಸಾಮಾನ್ಯ ಸಂಗತಿ ಎಂದು ಎಲ್ಲರೂ ತಿಳಿದಿದ್ದೆವು. ಆದರೆ ನೋಡ ನೋಡುತ್ತಿದ್ದಂತೆಯೇ ನೀರಿನ ರಭಸಕ್ಕೆ ಪೈಪ್ ಸ್ಫೋಟಗೊಂಡು ಪೈಪ್ ಮೇಲಿದ್ದ ಮಹಿಂದ್ರಾ ಬೊಲೆರೋ ವಾಹನ ಗಾಳಿಯಲ್ಲಿ ಚಿಮ್ಮಿತು. ಸುಮಾರು 10 ಅಡಿಗಳ ಮೇಲಕ್ಕೆ ಹಾರಿದ ವಾಹನ ಬಳಿಕ ನೆಲಕ್ಕೆ ಬಿತ್ತು. ಅದೃಷ್ಟವಶಾತ್ ಆ ಪ್ರದೇಶದಲ್ಲಿ ಜನ ನಿಂತಿರಲಿಲ್ಲ.