ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ: ಗೂಗಲ್ ನಿಂದ ದೆಹಲಿ ಪೊಲೀಸರಿಗೆ ಮಹತ್ವದ ಮಾಹಿತಿ

ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಗಲ್ ದೆಹಲಿ ಪೊಲೀಸರಿಗೆ ಮಹತ್ವದ ಮಾಹಿತಿಯನ್ನು ರವಾನಿಸಿದೆ.

10 ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರ ಬಗ್ಗೆ ಸಿಬಿಎಸ್ಇ ಮುಖ್ಯಸ್ಥರಿಗೆ ಕಳಿಸಲಾಗಿರುವ ಮೂರು ಇ-ಮೇಲ್ ವಿಳಾಸವನ್ನು ಗೂಗಲ್ ಪತ್ತೆ ಮಾಡಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. 
ದೆಹಲಿ ಕ್ರೈಮ್ ವಿಭಾಗದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ವಾಟ್ಸ್ ಆಪ್ ಮೂಲಕ ಗಣಿತ ಪ್ರಶ್ನೆ ಪತ್ರಿಕೆ ಲಭ್ಯವಾಗಿತ್ತು, ಇದು ಆ ವಿದ್ಯಾರ್ಥಿಯ ತಂದೆಯ ಇ-ಮೇಲ್ ಮೂಲಕ ಸಿಬಿಎಸ್ಇ ಮುಖ್ಯಸ್ಥರಿಗೆ ತಲುಪಿದೆ.  ವಿದ್ಯಾರ್ಥಿ ಹಾಗೂ ಆತನ ತಂದೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
ವಿಶೇಶ ಪೊಲೀಸ್ ಆಯುಕ್ತ(ಕ್ರೈಮ್) ಆರ್ ಪಿ ಉಪಾಧ್ಯಾಯ  ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಗೂಗಲ್ ನಿಂದ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು. ಪ್ರಕರಣದ ತನಿಖೆಯ ಪ್ರಗತಿಗಾಗಿ ದೆಹಲಿ ಪೊಲೀಸರು ಗೂಗಲ್ ನೆರವು ಕೋರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com