'ಆಹಾ ಎಂಥಾ ಭದ್ರತೆ'...ರಾಜಭವನದ ಆವರಣದಲ್ಲೇ ಗಂಧದ ಮರ ಕಳ್ಳತನ!

ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್​ ರಾವ್​ ಅವರ ನಿವಾಸದಲ್ಲಿ ಗಂಭೀರ ಭದ್ರತಾ ಲೋಪ ಕಂಡುಬಂದಿದ್ದು, ರಾಜಭವನದ ಆವರಣದಲ್ಲಿದ್ದ 4 ಗಂಧದ ಮರಗಳನ್ನು ಕಳ್ಳರ ಕದ್ದೊಯ್ದಿದ್ದಾರೆ.
ಕಡಿತಕ್ಕೊಳಗಾಗಿರುವ ಮರಗಳು
ಕಡಿತಕ್ಕೊಳಗಾಗಿರುವ ಮರಗಳು
ಪುಣೆ: ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್​ ರಾವ್​ ಅವರ ನಿವಾಸದಲ್ಲಿ ಗಂಭೀರ ಭದ್ರತಾ ಲೋಪ ಕಂಡುಬಂದಿದ್ದು, ರಾಜಭವನದ ಆವರಣದಲ್ಲಿದ್ದ 4 ಗಂಧದ ಮರಗಳನ್ನು ಕಳ್ಳರ ಕದ್ದೊಯ್ದಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ರಾಜಭವನದ ಆವರಣದಲ್ಲಿ ಬೆಳೆಸಲಾಗಿದ್ದ ಸುಮಾರು 20 ಸಾವಿರ ರೂ ಮೌಲ್ಯದ 4 ಮರಗಳನ್ನು ಕದೀಮರು ಕದ್ದು ಸಾಗಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.  ಮೂಲಗಳ ಪ್ರಕಾರ ಏಪ್ರಿಲ್ 30ರಂದು ಈ ಘಟನೆ ನಡೆದಿದ್ದು, ಘಟನೆಯಲ್ಲಿ ರಾಜಭವನದ ಭದ್ರತಾ ಅಧಿಕಾರಿಗಳ ಕೈವಾಡ ಕೂಡ ಇದೆ ಎಂದು ಶಂಕಿಸಲಾಗಿದೆ. ಆರಂಭದಲ್ಲಿ ಈ ಬಗ್ಗೆ ಯಾರಿಗೂ ಅನುಮಾನ ಮೂಡಿರಲಿಲ್ಲ. ಆದರೆ ರಾಜಭವನದಲ್ಲಿ ತೋಟದ ಕೆಲಸಗಾರರು ಕೆಲಸ ಮಾಡುತ್ತಿದ್ದ ವೇಳೆ ಅವರು ಮರ ಕಡಿದಿರುವುದನ್ನು ಗಮನಿಸಿದ್ದಾರೆ. ಆ ಮೂಲಕ ಈ ಪ್ರಕರಣ ಹೊರ ಬಿದ್ದಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕಸಭೆ ಸ್ಪೀಕರ್​ ಹಾಗೂ ಇನ್ನಿತರ ಸರ್ಕಾರಿ ಅಧಿಕಾರಿಗಳು ಪುಣೆಗೆ ಭೇಟಿ ನೀಡಿದಾಗ ತಂಗುವ ಜಾಗ ಇದಾಗಿದ್ದು, ರಾಜಭವನದ ಹತ್ತಿರದಲ್ಲೇ ಪೊಲೀಸ್​ ಠಾಣೆ ಇದ್ದರೂ ಭದ್ರತಾ ಲೋಪ ಉಂಟಾಗಿರುವುದು ಆತಂಕ ಸೃಷ್ಟಿಸಿದೆ. ಕೃತ್ಯ ಎಸಗಿರುವವರ ವಿರುದ್ಧ ಈಗಾಗಲೇ ಛತುಶೃಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com