ಬಿಹಾರ ಬಸ್ಸು ದುರಂತದಲ್ಲಿ 27 ಮಂದಿ ಸತ್ತಿಲ್ಲ - ಅಧಿಕೃತ ಮಾಹಿತಿ

ನಿನ್ನೆ ಸಂಭವಿಸಿದ್ದ ಮೊತಿಹರಿ ಬಸ್ ದುರಂತದಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಬಿಹಾರ ವಿಪತ್ತು ನಿರ್ವಹಣಾ ಸಚಿವ ದಿನೇಶ್ ಚಂದ್ರ ಯಾದವ್ ಸ್ಪಷ್ಟನೆ ನೀಡಿದ್ದಾರೆ.
ದುರಂತಕ್ಕೀಡಾದ ಬಸ್ಸಿನ ಚಿತ್ರ
ದುರಂತಕ್ಕೀಡಾದ ಬಸ್ಸಿನ ಚಿತ್ರ

ಬಿಹಾರ :  ನಿನ್ನೆ ಸಂಭವಿಸಿದ್ದ ಮೊತಿಹರಿ ಬಸ್ ದುರಂತದಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ  ಎಂದು ಬಿಹಾರ ವಿಪತ್ತು ನಿರ್ವಹಣಾ ಸಚಿವ ದಿನೇಶ್  ಚಂದ್ರ ಯಾದವ್ ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯ ಮಾಹಿತಿ ಆಧಾರಿಸಿ  27 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದೆ. ಆದರೆ, ಇದು ತಪ್ಪು ಮಾಹಿತಿ. ಅಂತಿಮ ಮಾಹಿತಿಯನ್ನು ಮಾತ್ರ ಪರಿಗಣಿಸುವುದಾಗಿ ಅವರು ಹೇಳಿದ್ದಾರೆ.

ಮುಜಾಫರ್ ನಗರಿಂದ ನವದೆಹಲಿಗೆ ತೆರಳುತ್ತಿದ್ದ ಬಸ್ಸು ರಾಷ್ಟ್ರೀಯ ಹೆದ್ದಾರಿ 28 ರ ಬಳಿಯ ಬೆಲ್ವಾ ಹಳ್ಳಿಯ ಬಳಿ ಕಂದಕಕ್ಕೆ ಉರುಳಿ ಬೆಂಕಿ ಹೊತ್ತಿಕೊಂಡಿತ್ತು.

 ಬಸ್ಸು ಖಾಸಗಿ ಸಂಸ್ಥೆಗೆ ಸೇರಿದ್ದಾಗಿದ್ದು, ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಬಸ್ಸು ಅಪಘಾತ ಸಂಭವಿಸಿತ್ತು ಎಂಬುದಾಗಿ ಪ್ರತ್ಯೇಕ್ಷದರ್ಶಿಗಳು ಹೇಳಿಕೆ ನೀಡಿದ್ದರು.  ಬಸ್ಸಿನಲ್ಲಿ ಮುಜಾಫರ್ ನಗರದ 32 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಬಸ್ಸನ್ನು ಕಂದಕದಿಂದ ಹೊರಗೆ ಎಳೆದಾಗ ಯಾವುದೇ ಮನುಷ್ಯರ ಗುರುತು ಪತ್ತೆಯಾಗಿಲ್ಲ ಎಂದು ಮುಜಾಫರ್ ನಗರ ವಲಯ ಐಜಿ  ಸುನೀಲ್ ಕುಮಾರ್  ಹೇಳಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com