ಉತ್ತರ ಪ್ರದೇಶ: ಮೊಬೈಲ್ ಸಂಖ್ಯೆ ನೀಡದ ಯುವತಿಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನ

ತಾನು ಮತ್ತೆ ಮತ್ತೆ ಕೇಳಿದರೂ ಯುವತಿ ಮೊಬೈಲ್ ಸಂಖ್ಯೆ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಜಮ್ ಘರ್(ಉತ್ತರ ಪ್ರದೇಶ): ತಾನು ಮತ್ತೆ ಮತ್ತೆ ಕೇಳಿದರೂ ಯುವತಿ ಮೊಬೈಲ್ ಸಂಖ್ಯೆ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ  ಘಟನೆ ಉತ್ತರ ಪ್ರದೇಶದ ಅಜಮ್ ಘರ್ ಜಿಲ್ಲೆಯಲ್ಲಿ ನಡೆದಿದೆ.
ಅಜಮ್ ಘರ್ ಜಿಲ್ಲೆ ಫರಿಹಾ ಗ್ರಾಮದ ದಲಿತ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಲಾಗಿದೆ. ಇದೇ ಗ್ರಾಮದ ನಿವಾಸಿಯಾದ ಮಹಮದ್ ಶಾಯಿ ಈ ದುಷ್ಕೃತ್ಯ ಎಸಗಿದ್ದಾನೆಂದು ಪೋಲೀಸರು ತಿಳಿಸಿದ್ದಾರೆ.
ಮಂಗಳವಾರ ಯುವತಿಯ ಮನೆಗೆ ತೆರಳಿದ್ದ ಮಹಮದ್ ತನಗೆ ಆಕೆಯ ಮೊಬೈಲ್ ಸಂಖ್ಯೆ ತಿಳಿಸುವಂತೆ ಪೀಡಿಸಿದ್ದಾನೆ.ಆಕೆ ತಾನು ಮೊಬೈಲ್ ಸಂಖ್ಯೆ ನೀಡಲು ನಿರಾಕರಿಸಿದಾಗ ಕುಪಿತಗೊಂಡ ಆರೋಪಿ ಮೊದಲು ಆಕೆಗೆ ಹೊಡೆದಿದ್ದಾನೆ. ಬಳಿಕ ಅವಳ ಮೇಲೆ ಸೀಮೀಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೋಲೀಸರು ಮಾಹಿತಿ ನಿಡಿದರು.
ಬೆಂಕಿಯಲ್ಲಿ ಸುಟ್ಟುಹೋಗುತ್ತಿದ್ದ ಯುವತಿಯ ಕಿರುಚಾಟ ಕೇಳಿದ ನೆರೆಹೊರೆಯ ಮನೆಯವರು ಒಟ್ಟಾಗಿ ಯುವತಿಯನ್ನು ಆವರಿಸಿದ್ದ ಬೆಂಕಿಯನ್ನು ಆರಿಸಿದ್ದಾರೆ.ಜತೆಗೆ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಡಿದು ಥಳಿಸಿ ಪೋಲೀಸರಿಗೆ ಒಪ್ಪಿಸಿದಾರೆ.
ಬೆಂಕಿಯಲ್ಲಿ ಸುಟ್ಟಿದ್ದ ಯುವತಿಗೆ ಸಮೀಪದ ಸರ್ದಾರ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು ಬಳಿಕ ಅವಳನ್ನು ವಾರಣಾಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಯುವತಿಯ ದೇಹವು ಶೇ.80ರಷ್ಟು ಸುಟ್ಟು ಹೋಗಿದೆ. ಇದೇ ವೇಳೆ ಆರೋಪಿಯನ್ನು ಸಹ ಸಾರ್ವಜನಿಕರು ಥಳಿಸಿದ್ದು ಆತನಿಗೆ ಸಹ ಗಾಯಗಳಾಗಿದೆ. ಆತನನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.
ಆರೋಪಿಯ ವಿರುದ್ಧ ಎಸ್ಸಿ / ಎಸ್ಟಿ ಕಾಯ್ದೆ, ಪೋಸ್ಕೋ ಕಾಯ್ದೆ, ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಕೋಮು ಸಂಘರ್ಷ ಏರ್ಪಡಬಹುದೆಂಬ ಮುಂದಾಲೋಚನೆಯಿಂದ ಗ್ರಾಮದಲ್ಲಿ ಹೆಚ್ಚಿನ ಪೋಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಆರಕ್ಷಕ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com