ಸುನಂದಾ ಪುಷ್ಕರ್ ಸಾವು ಪ್ರಕರಣ: ಜಾರ್ಜ್'ಶೀಟ್'ನಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಹೆಸರು

ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಸುನಂದ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಚಾರ್ಜ್'ಶೀಟ್ ದಾಖಲಿಸಿದ್ದು, ಚಾರ್ಜ್'ಶೀಟ್ ನಲ್ಲಿ ಕಾಂಗ್ರೆಸ್ ನಾಯಕ...
ಸುನಂದ ಪುಷ್ಕರ್ ಮತ್ತು ಶಶಿ ತರೂರ್
ಸುನಂದ ಪುಷ್ಕರ್ ಮತ್ತು ಶಶಿ ತರೂರ್
ನವದೆಹಲಿ: ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಸುನಂದ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಚಾರ್ಜ್'ಶೀಟ್ ದಾಖಲಿಸಿದ್ದು, ಚಾರ್ಜ್'ಶೀಟ್ ನಲ್ಲಿ ಪತಿ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಹೆಸರು ದಾಖಲಾಗಿರುವುದಾಗಿ ತಿಳಿದುಬಂದಿದೆ. 
ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆ 498 (ಗಂಡ ಅಥವಾ ಕುಟುಂಬಸ್ಥರು ಮಹಿಳೆಗೆ ಗಾಯಗೊಳಿಸುವುದು ಅಥವಾ ಪ್ರಾಣಾಪಾಯ ತಂದೊಡ್ಡುವುದು),  306 (ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಜಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್'ಶೀಟ್'ನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಅವರಿಗೆ ಸಲ್ಲಿಸಿದ್ದಾರೆ. 
ಶಶಿ ತರೂರ್ ಅವರು ಸುನಂದಾರನ್ನು 2010ರಲ್ಲಿ ಮದುವೆಯಾಗಿದ್ದರು. ಸುನಂದಾ ಪುಷ್ಕರ್ ಅವರು 2014 ಜನವರಿ 17ರಂದು ದೆಹಲಿಯ ಹೊಟೇಲೊಂದರ ಕೊಠಡಿಯೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.
ಕಳೆದ ವರ್ಷ ಜನವರಿಯಲ್ಲಿ ಸುನಂದಾ ಅವರ ಸಾವಿನ ಕುರಿತಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣವೊಂದನ್ನು ದಾಖಲಿಸಿದ್ದರು. ವಿಷಸೇವನೆಯಿಂದ ಸಾವು ಸಂಭವಿಸಿದೆ ಎಂದು ಅಖಿಲ ಭಾರತ ವೈದ್ಯಕೀಯ ಮಂಡಳಿ ವರದಿ ನೀಡಿದ್ದು, ಸುನಂದಾ ಅವರ ಒಳಾಂಗಗಳ ಮಾದರಿಯ ಸ್ಯಾಂಪಲ್ ನ್ನು ಪರೀಕ್ಷೆಗೆ ವಾಷಿಂಗ್ಟನ್ ನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು.
ಪ್ರಕರಣ ಸಂಬಂಧ ಶಶಿತರೂರ್ ವಿರುದ್ದ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದವು. ಪತ್ನಿ ಸಾವು ಕುರಿತು ಹೇಳಿಕೆ ನೀಡುತ್ತಿದ್ದ ಶಶಿ ತರೂರ್ ಅವರು, ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಎಂದು ತನಿಖೆಯುದ್ದಕ್ಕೂ ಹೇಳಿಕೊಂಡು ಬರುತ್ತಿದ್ದರು, ಅಲ್ಲದೆ, ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com