'ಭಾರತೀಯರು ಇನ್ನು ಮುಂದೆ ತಮ್ಮ ನಾಯಿಗೆ ವಜುಭಾಯಿ ವಾಲ ಎಂದು ಹೆಸರಿಡಬಹುದು': ಸಂಜಯ್ ನಿರುಪಮ್

ಕಾಂಗ್ರೆಸ್ ನಾಯಕ, ಮಾಜಿ ಸಂಸದ ಸಂಜಯ್ ನಿರುಪಮ್ ಅವರು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ...
ಸಂಜಯ್ ನಿರುಪಮ್
ಸಂಜಯ್ ನಿರುಪಮ್
Updated on: 
ಮುಂಬೈ: ಕಾಂಗ್ರೆಸ್ ನಾಯಕ, ಮಾಜಿ ಸಂಸದ ಸಂಜಯ್ ನಿರುಪಮ್ ಅವರು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿಷ್ಠೆಯನ್ನು ನಾಯಿಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ನಿಷ್ಠೆಯ ವಿಚಾರದಲ್ಲಿ ವಜುಭಾಯಿ ವಾಲಾ ಅವರು ಹೊಸ ದಾಖಲೆ ಬರೆದಿದ್ದು, ಇನ್ನು ಮುಂದೆ ಪ್ರತಿಯೊಬ್ಬ ಭಾರತೀಯರು ತಮ್ಮ ನಾಯಿಗೆ ವಜುಭಾಯಿ ವಾಲಾ ಎಂದು ಹೆಸರಿಡಬಹುದು. ಅವರಷ್ಟು ನಿಷ್ಠಾವಂತರು ಬೇರೆ ಯಾರೂ ಇರಲ್ಲ ಎಂದು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವ ಮೊದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಎಎನ್ಐ ಜತೆ ಮಾತನಾಡಿದ ಸಂಜಯ್ ನಿರುಪಮ್ ಅವರು, ಅಂತಿಮವಾಗಿ ಪ್ರಜಾಪ್ರಭುತ್ವ ಗೆದ್ದಿದೆ ಎಂದರು.
ರಾಜ್ಯಪಾಲರ ಕುರಿತು ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com