'ಬ್ರಹ್ಮೋಸ್ 2.0' ಖಂಡಾಂತರ ಕ್ಷಿಪಣಿ ಯಶಸ್ವೀ ಉಡಾವಣೆ

ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಸೋಮವಾರ ಯಶಸ್ವೀಯಾಗಿ ಉಡಾವಣೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಾಲಾಸೋರ್: ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಸೋಮವಾರ ಯಶಸ್ವೀಯಾಗಿ ಉಡಾವಣೆ ಮಾಡಲಾಗಿದೆ.
ಒಡಿಶಾದ ಚಾಂದಿಪುರ್ ನಲ್ಲಿ ಇಂದು ಬೆಳಗ್ಗೆ ಸುಮಾರು 10.44ರ ಸಂದರ್ಭದಲ್ಲಿ ಮೊಬೈಲ್ ಲಾಂಚರ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ನಿಗದಿತ ಗುರಿಯನ್ನು ನಿಖರವಾಗಿ ತಲುಪುವ ಮೂಲಕ ಕ್ಷಿಪಣಿ ಯಶಸ್ವಿಯಾಗಿದೆ ಎಂದು ಡಿಆರ್ ಡಿಒ ಮೂಲಗಳು ತಿಳಿಸಿವೆ.
ಇನ್ನು ಹಾಲಿ ಕ್ಷಿಪಣಿ ಈ ಹಿಂದಿನ ಕ್ಷಿಪಣಿಗಳಿಗಿಂತ ಸುಧಾರಿತ ಕ್ಷಿಪಣಿಯಾಗಿದ್ದು, ಇದರ ಆಯಸ್ಸು 10 ರಿಂದ 15 ವರ್ಷಗಳಿಗೆ ವೃದ್ದಿಯಾಗಿದೆ. ಕ್ಷಿಪಣಿ ತಯಾರಾದ 10 ವರ್ಷಗಳ ಬಳಿಕವೂ ಈ ಕ್ಷಿಪಣಿ ನಿಖರವಾಗಿ ತನ್ನ ಕಾರ್ಯಾಚರಣೆ ನಡೆಸಬಲ್ಲದು. ಅಂತೆಯೇ ಆಯಸ್ಸು ವೃದ್ಧಿಸಿಕೊಂಡ ಭಾರತದ ಮೊದಲ ಕ್ಷಿಪಣಿ ಎಂಬ ಕೀರ್ತಿಗೂ ಬ್ರಹ್ಮೋಸ್ ಪಾತ್ರವಾಗಿದೆ. 
ಈಗಾಗಲೇ ಭಾರತೀಯ ಸೇನೆಯ ಮೂರೂ ದಳಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ ಕಾರ್ಯಾಚರಣೆಯಲ್ಲಿದ್ದು, 2007ರಿಂದ ಸೇನೆ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಕೆ ಮಾಡುತ್ತಿದೆ. ಇನ್ನು ಕ್ಷಿಪಣಿ ಯಶಸ್ವೀ ಉಡಾವಣೆ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮಾಡಿದ್ದು, ಡಿಆರ್ ಡಿಒ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಂತೆಯೇ ಕ್ಷಿಪಣಿ ಪರೀಕ್ಷೆಯ ಯಶಸ್ಸಿನಿಂದ ಭಾರತದ ಕ್ಷಿಪಣಿ ತಯಾರಿಕೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೇನೆಯಲ್ಲಿ ಈ ಹಿಂದೆ ಬಳಕೆಯಲ್ಲಿ ಬ್ಲಾಕ್-3 ಸರಣಿಯ ಕ್ಷಿಪಣಿಗಳ ಬದಲಿಗೆ ಬ್ರಹ್ಮೋಸ್ ಕ್ಷಿಪಣಿಯ ಬಳಕೆ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com