ತಮಿಳುನಾಡು: ತೂತುಕುಡಿಯಲ್ಲಿ ಏನಿದು ಸ್ಟೆರ್ಲೈಟ್ ಕಾಪರ್ ವಿವಾದ?

ಇಲ್ಲಿನ ಸ್ಟೆರ್ಲೈಟ್ ಕಾಪರ್ ಕಂಪನಿ ಹೊರಸೂಸುವ ಅನಿಲದಿಂದಾಗಿ ಸಾರ್ವಜನಿಕರು ಉಸಿರಾಟ, ಶ್ವಾಸಕೋಶ , ಕಣ್ಣು ಮತ್ತಿತರ ಸಮಸ್ಯೆಯಿಂದಾಗಿ ನರಳುತ್ತಿದ್ದಾರೆ.
ಸ್ಟೆರ್ಲೈಟ್
ಸ್ಟೆರ್ಲೈಟ್

 ತೂತುಕುಡಿ : ತಮಿಳುನಾಡಿನ ತೂತುಕುಡಿಯಲ್ಲಿನ   ಸ್ಟೆರ್ಲೈಟ್ ಕಾಪರ್ ಕಂಪನಿ ಹೊರಸೂಸುವ ಅನಿಲದಿಂದಾಗಿ ಸಾರ್ವಜನಿಕರು ಉಸಿರಾಟ, ಶ್ವಾಸಕೋಶ , ಕಣ್ಣು ಮತ್ತಿತರ ಸಮಸ್ಯೆಯಿಂದಾಗಿ ನರಳುತ್ತಿದ್ದು, ಆರಂಭದಿಂದಲೂ ನಾನಾ ರೀತಿಯ ವಿವಾದಗಳಿಗೆ ಕಾರಣವಾಗಿದೆ.

ಲಂಡನ್ ಮೂಲದ  ಗಣಿ ಕಂಪನಿ ವೆಂದಾಂತ ರಿಸೊರ್ಸ್ ಕಂಪನಿ ಮಾಲೀಕತ್ವದ  ಸ್ಟಲೈರ್ಟ್  ನ್ನು ಮೊದಲ ಬಾರಿಗೆ ಬಿಹಾರದಲ್ಲಿ  ಉದ್ಯಮಿ  ಅನಿಲ್ ಅಗರ್ ವಾಲ್   ಆರಂಭಿಸಿದ್ದರು.

ನಂತರ 1992ರಲ್ಲಿ  ಮಹಾರಾಷ್ಟ್ರ ಸರ್ಕಾರದ ಸಹಯೋಗದಲ್ಲಿ  60 ಸಾವಿರ ಟನ್ ತಾಮ್ರ ಮಿಶ್ರಣ ಉತ್ಪಾದನೆಗಾಗಿ ರತ್ನಗಿರಿ ಜಿಲ್ಲೆಯಲ್ಲಿ 500 ಎಕರೆ ಜಮೀನು ಕೂಡಾ ನೀಡಲಾಗಿತ್ತು. ಆದರೆ,ಇಂತಹ ಉದ್ಯಮಗಳಿಂದ ಕರಾವಳಿ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಅಪಾಯಕಾರಿ ಎಂದು  ತಜ್ಞರ ಸಮಿತಿ ವರದಿ ನೀಡಿದ್ದ ನಂತರ 1993ರಲ್ಲಿ ಆ ಕಂಪನಿ ಸ್ಥಾಪನೆ ಮಾಡದಂತೆ  ಸರ್ಕಾರ ಆದೇಶ ಮಾಡಿತ್ತು.

ಹೀಗೆ ಮಹಾರಾಷ್ಟ್ರದಿಂದ ಹೊರ ನಡೆದ   ಸ್ಟೆರ್ಲೈಟ್  ಆಗಸ್ಟ್ 1994ರಲ್ಲಿ ತೂತುಕುಡಿಗೆ ಪ್ರವೇಶಿಸಿತ್ತು. ಪರಿಸರದ ಮೇಲೆ ಹಾನಿಯುಂಟು ಮಾಡುವ ಕಾರ್ಯ ಕೈಗೊಳ್ಳದಂತೆ ಸೂಚಿಸಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಪೇಕ್ಷಣಾ ಪತ್ರವನ್ನು ನೀಡಿತ್ತು.  1996 ಆಕ್ಟೋಬರ್ 14 ರಿಂದ ಸ್ಟೆರ್ಲೈಟ್  ಕಾರ್ಯಾರಂಭ ಮಾಡುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿತ್ತು.

ನಿಯಮಗಳ ಉಲ್ಲಂಘನೆ

ಮನ್ನಾರ್ ಕೊಲ್ಲಿಯಿಂದ 25 ಕಿಲೋ ಮೀಟರ್  ವ್ಯಾಪ್ತಿಗೊಳಪಟ್ಟಂತೆ ಕೆಲ ಷರತ್ತು ವಿಧಿಸಿ ತಮಿಳುನಾಡು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಪೇಕ್ಷಣಾ ಪತ್ರ ನೀಡಿದೆ. ಆದರೆ, ಇದು ಮನ್ನರ್ ಜೀವ ವೈವಿಧ್ಯಮ ಪ್ರದೇಶದ ಮೇಲೂ ಪರಿಣಾಮ ಬೀರುತ್ತಿದೆ ಎಂದು  ಪರಿಸರ ತಜ್ಞನಿತ್ಯನಾಂದ ಜಯರಾಮನ್  ಹೇಳುತ್ತಾರೆ.

 ಆದಾಗ್ಯೂ, ಮನ್ನರ್ ಕೊಲ್ಲಿಯ 14 ಕಿಲೋ ಮೀಟರ್  ಒಳಗಡೆ  ಸ್ಟೆರ್ಲೈಟ್   ಘಟಕ ನಿರ್ಮಾಣಕ್ಕೆ ಅನುಮತಿಯನ್ನು ವಿಸ್ತರಿಸಿ ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿ ತಾನೂ ಹಿಂದೆ ನೀಡಿದ್ದ ಷರತ್ತುಗಳನ್ನೆ ನಿರ್ಲಕ್ಷ್ಯ ಮಾಡಿದೆ . ಅಲ್ಲದೇ, ಕಂಪನಿಯ ಮನವಿ ಮೇರಿಗೆ ಹಸಿರುವ ವಲಯ ಪ್ರದೇಶವನ್ನು 250 ಮೀಟರ್ ಗಳಿಂದ 25 ಮೀಟರ್ ಗೆ  ಕುಗ್ಗಿಸಿದೆ ಎಂಬ ಮಾಹಿತಿಗಳು ಕೇಳಿಬಂದಿವೆ.

ಅನಾರೋಗ್ಯ ಸಂಬಂಧಿತ ದೂರು ದಾಖಲು.

ಕಂಪನಿ ಸ್ಥಾಪನೆಯಾದ ಒಂದು ತಿಂಗಳೊಳಗೆ ಉಸಿರಾಟ,  ಶ್ವಾಸಕೋಶ, ಕಣ್ಣು ಮತ್ತಿತರ  ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದು ಕಂಪನಿ ವಿರುದ್ಧ ಪ್ರತಿಭಟನೆಗೆ ಧುಮುಕ್ಕಿದರು. 1998ರಲ್ಲಿ ಇಂತಹ ಸರಣಿ ಕೇಸ್ ಗಳು ದಾಖಲಾಗಿದ್ದವು. ಸ್ಟೆರ್ಲೈಟ್  ಮಾಲಿನ್ಯ ಕುರಿತಂತೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಮದ್ರಾಸ್ ಹೈಕೋರ್ಟ್ ಗೆ ವರದಿ ಸಲ್ಲಿಸಿತ್ತು.

ಮದ್ರಾಸ್ ಹೈಕೋರ್ಟ್ ನಿಂದಾಗಿ ನವೆಂಬರ್ 23, 1998 ರಂದು  ಸ್ಟೆರ್ಲೈಟ್   ಕಂಪನಿಯನ್ನು ಮುಚ್ಚಲಾಗಿತ್ತು.  ಆದರೆ, ಮತ್ತೆ ಒಂದು ವಾರದ ನಂತರ ಮತ್ತೆ ಕಾರ್ಯಾರಂಭ ಮಾಡಿತ್ತು. ಮತ್ತೊಂದು ಅಧ್ಯಯನ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಎನ್ ಇಇಆರ್ ಐಗೆ ಸೂಚಿಸಿತ್ತು. ತದನಂತರ ಈ ಕಂಪನಿಗೆ ಕ್ಲಿನ್ ಚಿಟ್ ನೀಡಲಾಗಿತ್ತು.

ಸ್ಟೆರ್ಲೈಟ್   ಕಂಪನಿಯ ಅನಿಲ ಹೊರಸೂಸುವಿಕೆಯಿಂದಾಗಿ ಅಲ್ಲಿಯೇ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ ಆಕಾಶವಾಣಿಯ 11 ಕೆಲಸಗಾರರು ಮಾನಸಿಕ ಒತ್ತಡಕ್ಕೊಳಗಾಗಿ 1999ರಲ್ಲಿ ಆಸ್ಪತ್ರೆ ಸೇರಿದ್ದರು.  ಕಂಪನಿ ಪ್ರತಿದಿನ 392 ರಿಂದ 900 ಟನ್  ತಾಮ್ರ  ಉತ್ಪಾದನೆ ವಿಸ್ತರಣೆಗೆ  ಸುಪ್ರೀಂಕೋರ್ಟ್ ಮೇಲ್ವಿಚಾರಣಾ ಸಮಿತಿ 2004ರಲ್ಲಿ ಅನುಮತಿ ನೀಡಿರಲಿಲ್ಲ. ಆದರೆ, ಮಾರನೇ ದಿನ ಪರಿಸರ ಮತ್ತು ಅರಣ್ಯ ಸಚಿವಾಲಯ  ಆ ಕಂಪನಿ ಕಾರ್ಯಾಚರಣೆಗೆ ಅನುಮತಿ ನೀಡಿತ್ತು.

ಟುಟಿಕೊರಿನ್ ಜನತೆ ಸಲ್ಲಿಸಿದ್ದ ಎಲ್ಲಾ ದೂರುಗಳನ್ನು ಒಪ್ಪಿಕೊಂಡಿದ್ದ  ಸುಪ್ರೀಂಕೋರ್ಟ್  2013ರಲ್ಲಿ ಕಂಪನಿ ಮುಚ್ಚಿಸಲು ತಿರಸ್ಕರಿಸಿತ್ತು.  ತಾಮ್ರವನ್ನು  ವಿದ್ಯುತ್, ವಾಹನ, ರಕ್ಷಣೆಯಲ್ಲಿ ಬಳಸುವ ತಾಮ್ರ ಉತ್ಪಾದನೆಯಲ್ಲಿ ಈ ಕಂಪನಿ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್  ಕಂಪನಿಗೆ 100 ಕೋಟಿ ರೂಪಾಯಿ ದಂಡ ವಿಧಿಸಿ ಆದೇಶ ನೀಡಿತ್ತು.

 ಸ್ಟೆರ್ಲೈಟ್  ಕಂಪನಿ ವಿಸ್ತರಣೆಯನ್ನ ಸ್ಥಗಿತಗೊಳಿಸಬೇಕು ಹಾಗೂ ಆ ಕಂಪನಿಯನ್ನು ಮುಚ್ಚಬೇಕೆಂದು ಆಗ್ರಹಿಸಿ ಇದೇ ವರ್ಷದ ಮಾರ್ಚ್ 24 ರಂದು  ಟುಟಿಕೊರಿನ್ ನ ಚಿದಂಬರಂ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com