ಕೇರಳ: ನಿಪ್ಹಾ ವೈರಸ್'ಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಕೇರಳ ರಾಜ್ಯದಲ್ಲಿ ನಿಪ್ಹಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೋಝಿಕೋಡ್'ನ ಸೋಪ್ಪಿಕ್ಕಡಾ ಹಳ್ಳಿಯಲ್ಲಿ ಮತ್ತೊಬ್ಬರು ನಿಪ್ಹಾ ವೈರಸ್'ಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿರುವನಂತಪುರ; ಕೇರಳ ರಾಜ್ಯದಲ್ಲಿ ನಿಪ್ಹಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೋಝಿಕೋಡ್'ನ ಸೋಪ್ಪಿಕ್ಕಡಾ ಹಳ್ಳಿಯಲ್ಲಿ ಮತ್ತೊಬ್ಬರು ನಿಪ್ಹಾ ವೈರಸ್'ಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 
61 ವರ್ಷದ ಮೂಸಾ ಎಂಬುವವರು ನಿಪ್ಹಾ ವೈರಸ್'ಗೆ ತುತ್ತಾಗಿ ಮೃತಪಟ್ಟಿದ್ದಾರೆ. 
ನಿಪ್ಙಾ ವೈರಸ್ ದಾಳಿಯಿಂದ ಬಳಲುತ್ತಿದ್ದ ಮೂಸಾ ಅವರು ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಲೇರ್ ಸಹಾಯದಿಂದ ಮೂಸಾ ಅವರು ಬದುಕುಳಿದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆಂದು ಕೋಝಿಕೋಡ್'ನ ಬೇಬಿ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ವಿ.ಜಯ ಶ್ರೀ ಅವರು ಮಾಹಿತಿ ನೀಡಿದ್ದಾರೆ. 
ಈ ವರೆಗೂ 160 ಮಾದರಿಗಳನ್ನು ಪರೀಕ್ಷೆಗಾಗಿ ವಿರೊಲಾಜಿ ಸಂಸ್ಥೆಗೆ ಕಳುಹಿಸಲಾಗಿದೆ 160ರಲ್ಲಿ 13 ಮಾದರಿಗಳಲ್ಲಿ ನಿಪ್ಙಾ ವೈರಸ್ ಇರುವುದು ದೃಢಪಟ್ಟಿದೆ. ನಿಪ್ಙಾ ವೈರಸ್'ಗೆ ಈ ವರೆಗೂ 11 ಮಂದಿ ಬಲಿಯಾಗಿದ್ದಾರೆಂದು ತಿಳಿಸಿದ್ದಾರೆ. 
ಮೂಸಾ ಕುಟುಂಬದಲ್ಲಿ ಇದೂವರೆಗೂ ನಾಲ್ಕು ಮಂದಿ ನಿಪ್ಹಾ ವೈರಸ್'ಗೆ ಬಲಿಯಾಗಿದ್ದಾರೆ. ಇದೇ ವೇಳೆ ಮತ್ತಿಬ್ಬರಲ್ಲೂ ನಿಪ್ಙಾ ವೈರಸ್ ಕಂಡು ಬಂದಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com