ಜಮ್ಮು-ಕಾಶ್ಮೀರ : ಭದ್ರತಾ ಪಡೆಗಳ ಕಾರ್ಯಾಚರಣೆ ಸ್ಥಗಿತದ ನಂತರ ಕಲ್ಲು ತೂರಾಟ ಇಳಿಕೆ

ಕೇಂದ್ರಸರ್ಕಾರ ಜಮ್ಮು -ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಒಂದು ವಾರದ ಹಿಂದೆ ಅಮಾನತ್ತುಪಡಿಸಿದ ನಂತರ ಕಲ್ಲು ತೂರಾಟ ಪ್ರಕರಣದಲ್ಲಿ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಲ್ಲು ತೂರಾಟದ ಚಿತ್ರ
ಕಲ್ಲು ತೂರಾಟದ ಚಿತ್ರ
Updated on: 

ಜಮ್ಮು-ಕಾಶ್ಮೀರ : ಕೇಂದ್ರಸರ್ಕಾರ ಜಮ್ಮು -ಕಾಶ್ಮೀರದಲ್ಲಿ  ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಒಂದು ವಾರದ ಹಿಂದೆ ಅಮಾನತ್ತುಪಡಿಸಿದ ನಂತರ  ಕಲ್ಲು ತೂರಾಟ ಪ್ರಕರಣದಲ್ಲಿ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇ 16ರಿಂದ 23 ರವರೆಗೂ ಕೇವಲ 16 ಕಲ್ಲು ತೂರಾಟ ಪ್ರಕರಣಗಳ ಬಗ್ಗೆ ವರದಿಯಾಗಿವೆ. ಇದಕ್ಕೆ ಹೋಲಿಸಿದ್ದರೆ ಮೇ 8-15ರ ಅವಧಿಯಲ್ಲಿ  ಇಂತಹ 38 ಪ್ರಕರಣಗಳು ವರದಿಯಾಗಿದ್ದವು.

ಮೇ 16ರಿಂದ 23 ವರೆಗೆ ಶ್ರೀನಗರದಲ್ಲಿ 7, ಅನಂತ್ ನಾಗ್  ನಲ್ಲಿ 3, ಬುದ್ ಗಾಂ ಹಾಗೂ ಶೊಫಿಯಾನ್ ನಲ್ಲಿ ತಲಾ 2, ಬಂಡಿಪೊರ್ , ಬಾರಮುಲ್ಲಾದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

 ಮೇ 8ರಿಂದ 15 ರವರೆಗೆ ಶ್ರೀನಗರದಲ್ಲಿ 13, ಶೊಫಿಯಾನ್ ನಲ್ಲಿ 8, ಪುಲ್ವಾಮಾದಲ್ಲಿ 6, ಕುಪ್ವಾರದಲ್ಲಿ 4, ಅನಂತ್ ನಾಗ್ ನಲ್ಲಿ 2, ಬಂಡಿಪೊರ್  ಹಾಗೂ ಬುದ್ ಗಾಂನಲ್ಲಿ ತಲಾ 2 ಹಾಗೂ ಗಂಡೇರ್ಬಲ್ ನಲ್ಲಿ 1 ಪ್ರಕರಣಗಳು ದಾಖಲಾಗಿದ್ದವು.

ರಂಜಾನ್ ಕದನ ವಿರಾಮ ಯಶಸ್ವಿಯಾಗಲಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಪಿ. ವಾಯಿದ್ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ನೆಲೆಸಲು ಪ್ರಧಾನಿ ನರೇಂದ್ರಮೋದಿ ನೆರವಾಗಿದ್ದಾರೆ.  ದಕ್ಷಿಣ ಕಾಶ್ಮೀರದಲ್ಲಿ ಶಾಲೆಗೆ ಹೋದ  ಮಕ್ಕಳು ಮರಳಿ ಮನೆಗೆ ಬರುವಂತಾಗಿದೆ ಎಂಬ ವಿಶ್ವಾಸ ಪೋಷಕರಲ್ಲಿ ಮೂಡುವಂತಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ಟ್ವೀಟರ್ ನಲ್ಲಿ ಹೇಳಿದ್ದಾರೆ.

ಪವಿತ್ರ ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ  ಭದ್ರತಾ ಪಡೆಗಳು  ಯಾವುದೇ ರೀತಿಯ ಕಾರ್ಯಾಚರಣೆ ನಡೆಸದಂತೆ ಕೇಂದ್ರ ಗೃಹ ಸಚಿವಾಲಯ ಮೇ 16 ರಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಜಮ್ಮು-ಕಾಶ್ನೀರದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು  ಹೇಳಿದ್ದಾರೆ.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com