ಲಖನೌ: ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರದಲ್ಲಿ ಬಿರುಗಾಳಿ, ಸಿಡಿಲಿಗೆ ಒಟ್ಟಾರೆ 34 ಜನರು ಬಲಿಯಾಗಿದ್ದಾರೆ.
ಉನ್ನಾವೊ ಜಿಲ್ಲೆಯಲ್ಲಿ 5 ಜನರು ನಿಧನರಾಗಿದ್ದರೆ, 4 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಆಶ್ವಥಿ ಹೇಳಿದ್ದಾರೆ. ಖಾನ್ ಪುರದಲ್ಲಿ ಒಬ್ಬರು ಹಾಗೂ ರಾಯ್ ಬರೇಲಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿದೆ.
ಸಿಡಿಲು ಬಿರುಗಾಳಿ ಎದುರಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.