ತಮ್ಮನನ್ನೇ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದ ಮಾಯಾವತಿ, ಕಾರಣ ಏನು?

ಪ್ರಮುಖ ಬೆಳವಣಿಗೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ತಮ್ಮ ಸ್ವಂತ ತಮ್ಮನನ್ನೇ ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಪ್ರಮುಖ ಬೆಳವಣಿಗೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ತಮ್ಮ ಸ್ವಂತ ತಮ್ಮನನ್ನೇ ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಬಿಎಸ್ ಪಿ ಪಕ್ಷದಲ್ಲಿ ವಂಶಪಾರಂಪರ್ಯದ ಅಧಿಕಾರದ ಪಿಡುಗನ್ನು ಕಿತ್ತೊಗೆಯಬೇಕೆಂಬ ನಿಟ್ಟಿನಲ್ಲಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮ್ಮ ಸ್ವಂತ ತಮ್ಮ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದು, ಪಕ್ಷದಲ್ಲಿ ವಂಶಾಡಳಿತ ತಡೆಗೆ ಸಾಕಷ್ಟು ಕಠಿಣಕ್ರಮಗಳನ್ನೂ ಜಾರಿಗೆ ತಂದಿದ್ದಾರೆ. ಆನಂದ್ ಕುಮಾರ್ ಒಂದು ವರ್ಷದ ಹಿಂದಷ್ಟೇ ಬಿಎಸ್ ಪಿ ಪಕ್ಷದ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು.
ಮಾಯಾವತಿ ಅವರ ನಿರ್ಧಾರದಂತೆ ಇನ್ನು ಮುಂದೆ ಅಧ್ಯಕ್ಷ ಸ್ಥಾನಕ್ಕೇರುವ ವ್ಯಕ್ತಿಯ ಕುಟುಂಬದ ಸದಸ್ಯರು ಅಥವಾ ಆತ್ಮೀಯರು ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ ಹಾಗೂ ಲೋಕಸಭೆ, ಎಂಎಲ್ ಸಿ ಮತ್ತು ಸಂಸದನಾಗಿಯೂ ಆಯ್ಕೆ ಮಾಡುವಂತಿಲ್ಲ ಎಂದೂ ಬಿಎಸ್ ಪಿ ಮುಖ್ಯಸ್ಥೆ ಘೋಷಿಸಿದ್ದಾರೆ.
ಇದೇ ವೇಳೆ ಮುಂದಿನ 20 ವರ್ಷ ಬಿಎಸ್ ಪಿ ಪಕ್ಷದ ಅಧ್ಯಕ್ಷರಾಗಿ ತಾವೇ ಮುಂದುವರೆಯುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಬೇರೆ ಯಾವ ವ್ಯಕ್ತಿಯೂ ಬಿಎಸ್​ಪಿ ಪಕ್ಷದ ಅಧ್ಯಕ್ಷ, ಉತ್ತರಾಧಿಕಾರಿಯಾಗುವ ಕನಸು ಕಾಣುವುದು ಬೇಡ ಎಂಬುವುದನ್ನು ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com