ಜಮ್ಮುಕಾಶ್ಮೀರ: ಲೈಂಗಿಕ ಹಗರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಐವರು ದೋಷಿ

2006ರಲ್ಲಿ ಇಲ್ಲಿ ನಡೆದ ಲೈಂಗಿಕ ಹಗರಣದಲ್ಲಿ ಬಿಎಸ್ ಎಫ್ ಮಾಜಿ ಡಿಐಜಿ, ಡಿಎಸ್ ಪಿ ಸೇರಿದಂತೆ ಐವರು ಆರೋಪಿಗಳು ದೋಷಿಗಳೆಂದು ಚಂಡೀಘರ್ ನ ವಿಶೇಷ ಸಿಬಿಐ ನ್ಯಾಯಾಲಯ ಇಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ: 2006ರಲ್ಲಿ ಇಲ್ಲಿ ನಡೆದ ಲೈಂಗಿಕ ಹಗರಣದಲ್ಲಿ   ಬಿಎಸ್ ಎಫ್ ಮಾಜಿ ಡಿಐಜಿ, ಡಿಎಸ್ ಪಿ ಸೇರಿದಂತೆ ಐವರು ಆರೋಪಿಗಳು ದೋಷಿಗಳೆಂದು ಚಂಡೀಘರ್ ನ ವಿಶೇಷ ಸಿಬಿಐ ನ್ಯಾಯಾಲಯ ಇಂದು ಹೇಳಿದೆ.

ಹೆಚ್ಚುವರಿ  ಅಡ್ವೊಕೆಟ್ ಜನರಲ್ ಸೇರಿ  ಇಬ್ಬರನ್ನು  ಪ್ರಕರಣದಿಂದ  ಖುಲಾಸೆಗೊಳಿಸಿ  ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಗನ್ ಗೀತ್ ಕೌರ್ ತೀರ್ಪು ನೀಡಿದ್ದಾರೆ.

ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ  ಜೂನ್ 4 ರಂದು ಪ್ರಕಟಗೊಳ್ಳಲಿದೆ.   2006ರಲ್ಲಿ  ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಹಗರಣ ಭಾರೀ ಸುದ್ದಿಯಾಗಿತ್ತು.ಜಮ್ಮು-ಕಾಶ್ಮೀರ ಪೊಲೀಸರು  ವಶಪಡಿಸಿಕೊಂಡಿದ್ದ ಎರಡು ಸಿಡಿಗಳಲ್ಲಿ  ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ಸೆರೆಯಾಗಿತ್ತು.

ಅಪ್ರಾಪ್ತ ಬಾಲಕಿಯನ್ನು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಶರಣಾಗತ ಉಗ್ರರಿಗೆ  ಪೂರೈಕೆ ಮಾಡುವ ಮೂಲಕ   ಒತ್ತಡದಿಂದ ಲೈಂಗಿಕ  ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತಿತ್ತು.
ಈ ಹಗರಣದಲ್ಲಿ ಐವರು ಆರೋಪಿಗಳೆಂದು ದೋಷಿಗಳೆಂದು ಘೋಷಿಸಿದ್ದು, ಇಬ್ಬರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಸಿಬಿಐ ಪ್ರಾಸಿಕ್ಯೂಟರ್  ಕೆ. ಪಿ. ಸಿಂಗ್ ತಿಳಿಸಿದ್ದಾರೆ.
 ಈ ಪ್ರಕರಣದಲ್ಲಿ ಏಳು  ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದ್ದು, ಜೂನ್ 4 ರಂದು ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com