ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಭಾರತ-ಇಂಡೋನೇಷಿಯಾ ಪರಸ್ಪರ ಒಪ್ಪಿಗೆ

2025ರ ವೇಳೆಗೆ 50 ಶತಕೋಟಿ ಡಾಲರ್ ವರೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಪ್ರಯತ್ನಕ್ಕೆ ...
ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಜಕಾರ್ತದ ಅತಿದೊಡ್ಡ ಮಸೀದಿಗೆ ಭೇಟಿ ನೀಡಿದ್ದ ಸಂದರ್ಭ
ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಜಕಾರ್ತದ ಅತಿದೊಡ್ಡ ಮಸೀದಿಗೆ ಭೇಟಿ ನೀಡಿದ್ದ ಸಂದರ್ಭ

ಜಕಾರ್ತಾ: 2025ರ ವೇಳೆಗೆ 50 ಶತಕೋಟಿ ಡಾಲರ್ ವರೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಪ್ರಯತ್ನಕ್ಕೆ ಭಾರತ ಮತ್ತು ಇಂಡೋನೇಷಿಯಾ ಪರಸ್ಪರ ಒಪ್ಪಿಕೊಂಡಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಜಕಾರ್ತಾ ಅಧ್ಯಕ್ಷ ಜೊಕೊ ವಿಡೋಡೋ ಅವರೊಂದಿಗೆ ವಿಸ್ತಾರ ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಈ ವಿಷಯ ಪ್ರಕಟಿಸಿದ್ದಾರೆ.

ಇಂಡೋನೇಷಿಯಾಗೆ ಕಳೆದ ರಾತ್ರಿ ಅಧಿಕೃತ ಪ್ರವಾಸಕ್ಕೆ ಆಗಮಿಸಿದ ಪ್ರಧಾನಿ, ಎರಡೂ ದೇಶಗಳ ರಕ್ಷಣಾ, ಬಂದರು ಸುರಕ್ಷತೆ, ವ್ಯಾಪಾರ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಪರಸ್ಪರ ಸಹಕಾರ ಕುರಿತು ವಿಸ್ತ್ರೃತ ಮಾತುಕತೆ ನಡೆಸಿದರು.

ಭಾರತ ಮತ್ತು ಇಂಡೋನೇಷಿಯಾ ಸಮಗ್ರವಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಮೇಲ್ದರ್ಜೆಗೇರಿಸುವ ಸಂಬಂಧ ಒಪ್ಪಿಗೆ ಸೂಚಿಸಿವೆ. ಅಲ್ಲದೆ 2025ರ ವೇಳೆಗೆ ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರದಲ್ಲಿ 50 ಶತಕೋಟಿ ಡಾಲರ್ ವರೆಗೆ ವಹಿವಾಟನ್ನು ದ್ವಿಗುಣಗೊಳಿಸಲು ಪ್ರಯತ್ನಿಸುವ ಕುರಿತು ಸಹ ಒಪ್ಪಿಕೊಂಡಿವೆ.

ಇಂಡೋನೇಷಿಯಾದ ಕೇಂದ್ರ ಅಂಕಿಅಂಶ ಸಂಸ್ಥೆಯ ಪ್ರಕಾರ, ಎರಡೂ ದೇಶಗಳ ನಡುವಿನ ವ್ಯಾಪಾರದ ಮೊತ್ತ 2016ರಲ್ಲಿ 12.9 ಶತಕೋಟಿಯಷ್ಟಾಗಿದ್ದವು. 2017ರಲ್ಲಿ ಅದು ಶೇಕಡಾ 28.7ರಷ್ಟು ಹೆಚ್ಚಾಗಿ 18.13 ಶತಕೋಟಿಗೆ ತಲುಪಿತ್ತು. ಭಾರತಕ್ಕೆ ಇಂಡೋನೇಷಿಯಾದ ರಫ್ತು ವಹಿವಾಟು 14.8 ಶತಕೋಟಿಯಷ್ಟಾಗಿದ್ದು ಭಾರತದಿಂದ ಇಂಡೋನೇಷಿಯಾಗಿ ರಫ್ತಿನ ಪ್ರಮಾಣ 4.5 ಶತಕೋಟಿಯಷ್ಟಾಗಿದೆ.

ಎರಡೂ ದೇಶಗಳ ಮುಖಂಡರು ಮಾತುಕತೆ ಸಂದರ್ಭದಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ತ್ವರಿತವಾಗಿ ಕೆಲಸ ಮಾಡಲು ಮತ್ತು ಎರಡೂ ದೇಶಗಳ ಜನರಿಗೆ ವಿಸ್ತಾರವಾದ, ನ್ಯಾಯಸಮ್ಮತ ಮತ್ತು ಸಮತೋಲಿತ ಪ್ರಯೋಜನಕ್ಕೆ ಕೆಲಸ ಮಾಡಲು ಒಪ್ಪಿಕೊಂಡಿರುವುದಾಗಿ ಎರಡೂ ದೇಶಗಳ ಮುಖಂಡರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಸ್ಪರ ವ್ಯಾಪಾರ ಸಂಬಂಧವನ್ನು ವೃದ್ಧಿಸಲು ಆಸಿಯಾನ್ ಶೃಂಗರಾಷ್ಟ್ರಗಳು ಮತ್ತು ಭಾರತ ನಡುವೆ ಸ್ಥಿರ ಮತ್ತು ಪರಸ್ಪರ ಲಾಭಗಳ ವ್ಯಾಪಾರ ವೃದ್ಧಿಗೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com