ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ, ಅಬಕಾರಿ ಸುಂಕ ಇಳಿಕೆ ಮಾಡಿದ ಕೇರಳ ಸರ್ಕಾರ

ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಏರಿಕೆಯಾಗುತ್ತಲೇ ಇರುವಂತೆ ಆಯಾ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಅಬಕಾರಿ ಸುಂಕ ಇಳಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ಹೊತ್ತಲ್ಲೇ ಕೇರಳ ಸರ್ಕಾರ ತನ್ನ ಪಾಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಿರುವನಂತಪುರಂ: ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಏರಿಕೆಯಾಗುತ್ತಲೇ ಇರುವಂತೆ ಆಯಾ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಅಬಕಾರಿ ಸುಂಕ ಇಳಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ಹೊತ್ತಲ್ಲೇ ಕೇರಳ ಸರ್ಕಾರ ತನ್ನ ಪಾಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದೆ.
ಕೇರಳ ಸರ್ಕಾರ ತೈಲ ದರವನ್ನು ರು1 ರೂಪಾಯಿಯಷ್ಟು ಇಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಕೇರಳದಲ್ಲಿ ತೈಲ ದರ ಒಂದು ರೂ. ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಅಬಕಾರಿ ಸುಂಕ ಇಳಿಕೆ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಈ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಎಂಬ ಕೀರ್ತಿಗೂ ಕೇರಳ ಭಾಜನವಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಈ ನಿರ್ಧಾರ ಜೂನ್. 1ರಿಂದ ಜಾರಿಗೆ ಬರಲಿದೆ.
'ತೈಲ ದರದ ಇಳಿಕೆಯಿಂದ ರಾಜ್ಯಕ್ಕೆ ರೂ.509 ಕೋಟಿ ನಷ್ಟವಾಗುತ್ತಿತ್ತು. ಅಲ್ಲದೇ ಇಡೀ ದೇಶ ತೈಲದ ದರವನ್ನು ಇಳಿಸುವಂತೆ  ಒತ್ತಾಯ ಹೇರಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ ಕಿವಿಗೊಡಲಿಲ್ಲ. ಹಾಗಾಗಿ ಈ ನಿರ್ಧಾರದ ಮುಖೇನ ಕೇಂದ್ರ ಸರ್ಕಾರಕ್ಕೆ ನಾವು ಸಂದೇಶ ರವಾನಿಸಿದ್ದೇವೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಪೆಟ್ರೋಲ್ ಪ್ರತಿ ಲೀಟರ್ ದರ 3.8 ಹಾಗೂ ಡೀಸೆಲ್ ದರ 3.38ರಷ್ಟು ಏರಿಕೆಯಾಗಿತ್ತು. ಇದು ಈ ವರೆಗಿನ ಗರಿಷ್ಛ ದರ ಏರಿಕೆಯಾಗಿತ್ತು. 
ಬುಧವಾರ ಪೆಟ್ರೋಲ್‌ ಮತ್ತು ಡಿಸೇಲ್ ದರ 1 ಪೈಸೆಯಷ್ಟು ಇಳಿಕೆಯಾಗಿದ್ದು,  ಈ ನಿರ್ಣಯದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ತಾಂತ್ರಿಕ ದೋಷದಿಂದ ದರ ಇಳಿಕೆ 60 ಪೈಸೆ ಎಂದು ಪ್ರಕಟಗೊಂಡಿರುವುದಾಗಿ ಐಒಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com