ಅಸ್ಸಾಂ, ಪಂಜಾಬ್ ಹೊತ್ತಿ ಉರಿಸಲು ಬಾಹ್ಯ ಶಕ್ತಿಗಳಿಂದ ಪ್ರಯತ್ನ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಅಸ್ಸಾಂ ಮತ್ತು ಪಂಜಾಬ್ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳಿ ಮಾಡಲು ಬಾಹ್ಯ ಶಕ್ತಿಗಳು ತೀವ್ರ ಹವಣಿಸುತ್ತಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಸ್ಸಾಂ ಮತ್ತು ಪಂಜಾಬ್ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳಿ ಮಾಡಲು ಬಾಹ್ಯ ಶಕ್ತಿಗಳು ತೀವ್ರ ಹವಣಿಸುತ್ತಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ರಕ್ಷಣಾ ವಿಭಾಗ ಚಿಂತರಕ ಛಾವಡಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಪಿನ್ ರಾವತ್ ಅವರು, 'ಪಂಜಾಬ್‌ ನಲ್ಲಿ ಭಯೋತ್ಪಾದನೆಗೆ ಮತ್ತೊಮ್ಮೆ ಚಾಲನೆ ನೀಡಲು 'ಬಾಹ್ಯಶಕ್ತಿಗಳು' ಯತ್ನಿಸುತ್ತಿವೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
'ಪಂಜಾಬ್‌ ಸದ್ಯ ಶಾಂತಿಯುತವಾಗಿದೆ. ಆದರೆ ಬಾಹ್ಯ ಶಕ್ತಿಗಳ ನೆರವಿನಿಂದ ರಾಜ್ಯದಲ್ಲಿ ಗಲಭೆಗೆ ಮರುಚಾಲನೆ ನೀಡಲು ಸಕಲ ಯತ್ನಗಳು ನಡೆಯುತ್ತಿವೆ. ಈ ವಿಚಾರವಾಗಿ ನಾವು ಬಹಳ ಎಚ್ಚರಿಕೆಯಿಂದಿರಬೇಕು. ಪಂಜಾಬ್‌ನಲ್ಲಿ ಕೆಲಸ ಮುಗಿಯಿತು ಎಂದು ಅಲಕ್ಷ್ಯ ಮಾಡಿ ಕಣ್ಣು ಮುಚ್ಚಿ ಕುಳಿತರೆ ಪರಿಸ್ಥಿತಿ ಕೈಮೀರಲಿದೆ. ದೇಶದ ಆಂತರಿಕ ಸಮಸ್ಯೆಗಳಿಗೆ ಬಾಹ್ಯ ಸಂಪರ್ಕಗಳು ಇರುವ ಕಾರಣ ಪರಿಹಾರ ಕಂಡುಕೊಳ್ಳಲು ಬಹಳ ಕಷ್ಟವಾಗುತ್ತಲೇ ಬಂದಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಕೇವಲ ಮಿಲಿಟರಿಯಿಂದ ಸಾಧ್ಯವಿಲ್ಲ. ಇದಕ್ಕೆ ಸರ್ಕಾರದ ಎಲ್ಲ ಸಂಸ್ಥೆಗಳು, ಸಾರ್ವಜನಿಕ ಆಡಳಿತ, ಪೊಲೀಸ್‌ ಇಲಾಖೆಗಳೊಂದಿಗೆ ಸಾರ್ವಜನಿಕ ವಲಯ ಕೂಡ ಕೈಜೋಡಿಸಬೇಕಿದೆ  ಎಂದು ರಾವತ್‌ ಹೇಳಿದ್ದಾರೆ.
ಪಂಜಾಬ್‌ ಮಾತ್ರವಲ್ಲದೇ ಈಶಾನ್ಯದ ನಾಗಾಲ್ಯಾಂಡ್‌, ಮಣಿಪುರ, ಅಸ್ಸಾಂನಲ್ಲೂ ಗಲಭೆಗೆ ಮರುಚಾಲನೆ ನೀಡಲು ಸಕಲ ಯತ್ನಗಳು ನಡೆಯುತ್ತಿವೆ ಎಂದು ರಾವತ್‌ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com