'ಅವನಿ' ಹತ್ಯೆ: ಮಹಾ ಅರಣ್ಯ ಸಚಿವರನ್ನು ವಜಾಗೊಳಿಸಿ- ಸಿಎಂ ಫಡ್ನವಿಸ್ ಗೆ ಮನೆಕಾ ಗಾಂಧಿ ಆಗ್ರಹ

13 ಮಂದಿಯನ್ನು ತಿಂದು ಹಾಕಿದ್ದ ನರಭಕ್ಷಕ ಅವನಿ ಎಂಬ ಹೆಣ್ಣು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...
ಸುಧೀರ್ ಮುಂಗತಿವಾರ್ - ಮನೇಕಾ ಗಾಂಧಿ
ಸುಧೀರ್ ಮುಂಗತಿವಾರ್ - ಮನೇಕಾ ಗಾಂಧಿ
Updated on: 
ನವದೆಹಲಿ: 13 ಮಂದಿಯನ್ನು ತಿಂದು ಹಾಕಿದ್ದ ನರಭಕ್ಷಕ ಅವನಿ ಎಂಬ ಹೆಣ್ಣು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ವಜಾಗೊಳಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಫಡ್ನವಿಸ್ ಅವರಿಗೆ ಪತ್ರ ಬರೆದಿರುವ ಮನೇಕಾ ಗಾಂಧಿ, ವನ್ಯ ಜೀವಿಗಳನ್ನು ರಕ್ಷಿಸುವ ಸ್ಥಾನದಲ್ಲಿದ್ದು, ಅವನಿ ಹತ್ಯೆಗೆ ಅವಕಾಶ ನೀಡಿರುವುದು ದುರಂತ. ಹೀಗಾಗಿ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಅರಣ್ಯ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಅರಣ್ಯ ಅಧಿಕಾರಿಗಳು ಪ್ರಾಣಿಗಳನ್ನು ರಕ್ಷಿಸಲು ಇರುವುದೇ ಹೊರತು, ಹತ್ಯೆ ಮಾಡಲು ಸೂಚಿಸಲು ಅಲ್ಲ. ಮಕ್ಕಳ ಅಭಿವೃದ್ಧಿ, ಏಳಿಗೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶ್ರಮಿಸುತ್ತದೆ. ಅದರಂತೆ ಅರಣ್ಯ ಇಲಾಖೆ ವನ್ಯ ಜೀವಿಗಳ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಕಿಡಿಕಾರಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಈ ಹುಲಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಮಹಾರಾಷ್ಟ್ರದ ಯಾವತ್ಮಲ್ ಅರಣ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com