ಯಶವಂತ್ ಸಿನ್ಹಾ ಹುಟ್ಟು ಹಬ್ಬಕ್ಕೆ ಶುಭ ಕೋರಿ, ಪಕ್ಷದ ಹಿರಿಯ ನಾಯಕ ಎಂದ ಬಿಜೆಪಿ

ಕಳೆದ ಏಪ್ರಿಲ್ ನಲ್ಲಿ ಬಿಜೆಪಿ ತೊರೆದಿದ್ದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹುಟ್ಟು ಹಬ್ಬಕ್ಕೆ...
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ
Updated on
ನವದೆಹಲಿ: ಕಳೆದ ಏಪ್ರಿಲ್ ನಲ್ಲಿ ಬಿಜೆಪಿ ತೊರೆದಿದ್ದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹುಟ್ಟು ಹಬ್ಬಕ್ಕೆ ರಾಜಸ್ಥಾನ ಬಿಜೆಪಿ ಶುಭಾಶಯ ಕೋರಿದ್ದು, ಅವರು ನಮ್ಮ ಪಕ್ಷದ ಹಿರಿಯ ನಾಯಕರು ಎಂದು ಹೇಳಿದೆ.
ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.  ದೇವರು ನಿಮಗೆ ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸುವುದಾಗಿ ರಾಜಸ್ಥಾನ ಬಿಜೆಪಿ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ಯಶವಂತ್ ಸಿನ್ಹಾ ಅವರು ಕಳೆದ ಏಪ್ರಿಲ್ 21ರಂದು ಪಾಟ್ನಾದಲ್ಲಿ ತಾವು ಬಿಜೆಪಿ ತೊರೆಯುತ್ತಿದ್ದು, ಎಲ್ಲಾ ರೀತಿಯ ಪಕ್ಷ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದ್ದರು.
ಬಿಜೆಪಿ ತೊರೆದ ನಂತರ ಯಶವಂತ್ ಸಿನ್ಹಾ ಅವರು ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಹಲವು ಯೋಜನೆಗಳನ್ನು ಕಟುವಾಗಿ ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com