ಅಪನಗದೀಕರಣದ ಗಾಯ, ಕಲೆಗಳು ಈ 2 ವರ್ಷಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ: ಮನಮೋಹನ್ ಸಿಂಗ್

ಮೋದಿ ಸರ್ಕಾರದ ಅಪನಗದೀಕರಣದ ಕ್ರಮಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹಾಗೂ ಆರ್ಥಿಕ ಸಂಶೋಧಕ ಅಮನಮೋಹನ್ ಸಿಂಗ್ ಕೇಂದ್ರದ ವಿರುದ್ಧ ದಾಳಿ ನಡೆಸಿದ್ದಾರೆ.
ಮನಮೋಹನ್ ಸಿಂಗ್
ಮನಮೋಹನ್ ಸಿಂಗ್
Updated on
ನವದೆಹಲಿ: ಮೋದಿ ಸರ್ಕಾರದ ಅಪನಗದೀಕರಣದ ಕ್ರಮಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹಾಗೂ ಆರ್ಥಿಕ ಸಂಶೋಧಕ ಅಮನಮೋಹನ್ ಸಿಂಗ್ ಕೇಂದ್ರದ ವಿರುದ್ಧ ದಾಳಿ ನಡೆಸಿದ್ದಾರೆ. ಅಪನಗದೀಕರಣವು "ದುರದೃಷ್ಟ" ಹಾಗೂ "ದುರಾಲೋಚನೆ"ಯ ಕ್ರಮ ಎಂದು ಅವರು ಜರೆದಿದ್ದಾರೆ.
ಅಪನಗದೀಕರಣದಿಂದ ಆರ್ಥಿಕತೆಗೆ ಆದ ಗಾಯಗಳು ಈ ಎರಡು ವರ್ಷಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದ ಮನಮೋಹನ್ ಸಿಂಗ್ ಆರ್ಥಿಕತೆ ಕುರಿತು ಪಾರದರ್ಶಕತೆಯ ಪುನರ್ ಸ್ಥಾಪನೆ ಆಗಬೇಕು ಎಂದರು.
ಅಪನಗದೀಕರಣದಿಂದ ಬಾರತೀಯ ಆರ್ಥಿಕತೆಯ ಮೇಲೆ ಆದ ದುಷ್ಪರಿಣಾಮದ ಅರಿವು ಎಲ್ಲರಿಗೆ ಇದೆ. ಎಂದು ಸಿಂಗ್ ಹೇಳಿದರು.
2016ರ ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂತರ 1,000 ರೂ. ಮತ್ತು 500 ರೂಪಾಯಿ ಬ್ಯಾಂಕ್ ನೋಟುಗಳ ಮೇಲೆ ನಿಷೇಧವನ್ನು ಘೋಷಿಸಿದರು.
"ನೋಟ್ ಬ್ಯಾನ್" ವಯಸ್ಸು, ಲಿಂಗ, ಧರ್ಮ, ಉದ್ಯೋಗ ಅಥವಾ ಸಮುದಾಯದ ಹೊರತಾಗಿ ಪ್ರತಿ ವ್ಯಕ್ತಿಯ ಮೇಲೆ ಪ್ರಭಾವ ಬೀರಿದೆ. ಕಾಲವು ಅತ್ಯುತ್ತಮ ವೈದ್ಯ. ಆದರೆ ಅಪನಗದೀಕರಣದ ಗಾಯಗಳು ಈ ಕಾಲಮಾನದಲ್ಲಿ ಹೆಚ್ಚು ಗೋಚರವಾಗುತ್ತಿದೆ. ಎಂದರೆ ಸಮಯವು ಗಾಯವನ್ನು ಮಾಗಿಸುವ ಬದಲು ಆದ ಗಾಯವನ್ನೇ ಮತ್ತೆ ಮತ್ತೆ ನೆನೆಸಿಕೊಳ್ಳುವಂತೆ ಮಾಡಿ ನೋವನ್ನು ಹೆಚ್ಚು ಮಾಡುತ್ತಿದೆ" ಸಿಂಗ್ ಹೇಳಿದ್ದಾರೆ.
ಸಣ್ಣ ಮಧ್ಯಮ ಗಾತ್ರದ ಉದ್ಯಮಗಳು ಭಾರತ ಆರ್ಥಿಕತೆಯ ಆಧಾರ ಸ್ತ್ಜಂಭಗಳಾಗಿದ್ದು ಅವುಗಳಿನ್ನೂ ಅಪನಗದೀಕರಣ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ.ಯುವಕರಿಗೆ ಸರಿಯಾಗಿ ಉದ್ಯೋಗ ಸೃಶ್ಃಟಿಯಾಗುತ್ತಿಲ್ಲ.ಅಪನಗದೀಕರಣದಿಂದ ನೋಟು ಸಮಸ್ಯೆಯಾಗಿ ಮಾರುಕಟ್ಟೆ ಮೇಲೆ ಇದರ ನೇರ ಕರಾಳ ಪರಿಣಾಮ ಉಂತಾಗಿದೆ ಎಂದು ಮಾಜಿ ಪ್ರಧಾನಿಗಳು ವಿಶ್ಲೇಷಿಸಿದ್ದಾರೆ.
"ಕುಸಿದ ರುಪಾಯಿ ಮೌಲ್ಯ ಹಾಗೂ ಹೆಚ್ಚಿದ ಪೆಟ್ರೋಲ್ ಹಾಗೂ ತೈಲ ಬೆಲೆಗಳಿಂದ ಸಮಸ್ಯೆಗಳು ಇನ್ನಷ್ಟು ಬೃಹದಾಕಾರ ತಾಳುತ್ತಿದೆ. ಆರ್ಥಿಕ ನೀತಿಯಲ್ಲಿ ಖಚಿತತೆ, ಪಾರದರ್ಶಕತೆಯನ್ನು ಪುನರ್ ಸ್ಥಾಪಿಸಲು ಮನಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com