ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದ ಏರ್ ಇಂಡಿಯಾ ಕ್ಯಾಪ್ಟನ್, ವಿಮಾನ 6 ಗಂಟೆ ವಿಳಂಬ

ದೆಹಲಿಯಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಮದ್ಯಪಾನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ದೆಹಲಿಯಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಾರಣ ವಿಮಾನ ಸುಮಾರು ಆರು ಗಂಟೆ ತಡವಾಗಿ ಟೇಕ್‌ ಆಫ್ ಆದ ಘಟನೆ ಭಾನುವಾರ ನಡೆದಿದೆ. 
ಕುಡಿದು ವಿಮಾನ ಚಲಾಯಿಸಲು ಬಂದ ಅರವಿಂದ್ ಅವರನ್ನು ಕರ್ತವ್ಯ ನಿರ್ವಹಿಸಲು ತೆರಳುವ ಮೊದಲು ವೈದ್ಯಾಧಿಕಾರಿ ಉಸಿರು ಪರೀಕ್ಷೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. 
ವೈದ್ಯಾಧಿಕಾರಿಗಳು ಅರವಿಂದ್ ಅವರನ್ನು ಎರಡು ಬಾರಿ ಉಸಿರು ಪರೀಕ್ಷೆಗೆ ಒಳಪಡಿಸಿದಾಗಲೂ ಅವರು ಪರೀಕ್ಷೆಯಲ್ಲಿ ವಿಫಲರಾಗಿದ್ದು, ಅವರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ, ಮತ್ತೊಬ್ಬ ಪೈಲಟ್ ಅನ್ನು ನಿಯೋಜಿಸಲಾಗಿದೆ.
ಕ್ಯಾಪ್ಟನ್ ಅರವಿಂದ್ ಅವರು ಈ ಹಿಂದೆಯೂ 2017, ಜನವರಿ 19ರಂದು ಕುಡಿದು ಬಂದು ಸಿಕ್ಕಿಬಿದ್ದಿದ್ದರು. ಈ ಕುರಿತು ಅವರ ವಿರುದ್ಧ ಭಾರತೀಯ ಪೈಲಟ್ಸ್ ಸಂಘ ದೂರು ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com