ಮಹಾರಾಷ್ಟ್ರ: ಮಹಿಳೆ ಹೊಟ್ಟೆಯಲ್ಲಿ ಮಂಗಳಸೂತ್ರ, ಬೋಲ್ಟ್, ಪಿನ್'ಗಳು ಸೇರಿ 1.5 ಕೆಜಿ ವಸ್ತು ಪತ್ತೆ!

ಮಂಗಳಸೂತ್ರ, ನಟ್'ಗಳು, ಸೇಫ್ಟಿ ಪಿನ್ ಗಳು, ಯು-ಪಿನ್ ಗಳು, ತಾಮ್ರದ ರಿಂದ್ ಸೇರಿ ಸುಮಾರು 1.5 ಕೆಜಿ ಯಷ್ಟು ವಸ್ತುಗಳು ಮಾನಸಿಕ ಅಸ್ವಸ್ತ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಹಮದಾಬಾದ್: ಮಂಗಳಸೂತ್ರ, ನಟ್'ಗಳು, ಸೇಫ್ಟಿ ಪಿನ್ ಗಳು, ಯು-ಪಿನ್ ಗಳು, ತಾಮ್ರದ ರಿಂದ್ ಸೇರಿ ಸುಮಾರು 1.5 ಕೆಜಿ ಯಷ್ಟು ವಸ್ತುಗಳು ಮಾನಸಿಕ ಅಸ್ವಸ್ತ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿವೆ. 
ಮಹಾರಾಷ್ಟ್ರದ ಶಿರಡಿ ಮೂಲದವರಾಗಿರುವ ಸಂಗೀತ ಎಂಬ ಮಹಿಳೆ ಅತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
ಸಂಗೀತಾ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಬೀದಿಗಳಲ್ಲಿ ಅಲೆದಾಡುತ್ತಿದ್ದರು. ನ್ಯಾಯಾಲಯದ ಆದೇಶದಂತೆಯೇ ಅವರನ್ನು ಮಾನಸಿಕ ಆರೋಗ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಅತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬಳಿಕ ಅ.31 ರಂದು ನಾಗರೀಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳಿಕ ಹೊಟ್ಟೆ ಕಲ್ಲಿನಂತೆ ಗಟ್ಟಿಯಾಗಿರುವುದು ಕಂಡು ಬಂದಿದೆ. ಬಳಿಕ ಎಕ್ಸ್'ರೇ ತೆಗೆದ ವೈದ್ಯರಿಗೆ ಮಹಿಳೆಯ ಶ್ವಾಸಕೋಶದಿಂದ ಸೇಫ್ಟಿ ಪಿನ್ ಗಳು ಹೊರಗೆ ಬಂದಿರುವುದು ಕಂಡು ಬಂದಿದೆ. ಇದರಂತೆ ಪಿನ್ ವೊಂದು ಮಹಿಳೆಯ ಹೊಟ್ಟೆಯನ್ನು ಸೀಳಿದೆ. ಕೂಡಲೇ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಮುಂದಾಗಿದ್ದಾರೆ. 
ಇದರಂತೆ ಸುಮಾರು ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ಸುಮಾರು 1.5 ಕೆಜಿಯಷ್ಟು ಪಿನ್'ಗಳು, ಮಂಗಳಸೂತ್ರ, ಹೇರ್ ಪಿನ್, ಯು ಪಿನ್, ಬಳೆಗಳನ್ನು ಹೊರಗೆ ತೆಗೆದಿದ್ದಾರೆ. 
ಮಹಿಳೆ ಅಕ್ಯೂಫಾಗಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚೂಪಾದ ವಸ್ತುಗಳನ್ನು ತಿನ್ನುವುದು ಈ ರೋಗದ ಲಕ್ಷಣವಾಗಿದೆ. ಈ ಕಾಯಿಲೆ ಸಾಮಾನ್ಯವಾಗಿ ಮಾನಸಿಕ ಅಸ್ವಸ್ತರಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com