ರಾಯಪುರ: ಛತ್ತೀಸ್ಗಢದ ಬಿಜಾಪುರದಲ್ಲಿ ಮಾವೋವಾದಿಗಳು ಐಇಡಿ ಸ್ಫೋಟಗೊಳಿಸಿದ್ದು, ದಾಳಿಯಲ್ಲಿ 6 ಗಡಿ ಭದ್ರತಾ ಪಡೆಗಳ (ಬಿಎಸ್ಎಫ್) ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ನಕ್ಸಲರು ಸ್ಫೋಟಕ ವಸ್ತು ಅಥವಾ ಐಇಡಿಯಿಂದ ಸ್ಫೋಟಗೊಳಿಸಿರಬಹುದು. ಘಟನೆಯಲ್ಲಿ 6 ಯೋಧರು ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಗಾಯಗೊಂಡಿರುವ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.